Karnataka Rajyotsava ಪ್ರಶಸ್ತಿ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ
Kannada rajyotsava ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರತೀ ವರ್ಷ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಕೆಲವು ವರ್ಷಗಳಲ್ಲಿ ಅರ್ಹರಿಗೆ ಪ್ರಶಸ್ತಿ ಸಂದಾಯವಾಗಿಲ್ಲ ಅನ್ನುವ ಆರೋಪಗಳೂ ಕೇಳಿ ಬಂದಿತ್ತು. ಹಾಗಂತ ಸಾಧಕರಿಗೆ ಸಲ್ಲಬೇಕಾದ ಪ್ರಶಸ್ತಿ ಲಾಭಿಯಿಂದ ಇನ್ನೂ ಮುಕ್ತಾಯವಾಗಿಲ್ಲ ಅನ್ನುವುದು ದುರಂತ.
ಈ ನಡುವೆ ಈ ವರ್ಷ 25 ಸಾವಿರ ಮಂದಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದು, ಅದನ್ನು ಈಗ 68ಕ್ಕೆ ಇಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಸ್ ನಡೆಸಿದೆ. ಸಾಧನೆಯಲ್ಲೂ ಧರ್ಮ, ಜಾತಿ, ಪ್ರಾದೇಶಿಕವಾರು, ಸಾಹಿತ್ಯ, ಸಮಾಜ ಸೇವೆ, ಕಲೆ ಹೀಗೆ ಕ್ಷೇತ್ರವಾರು ವಿಂಗಡಿಸಬೇಕಾಗಿರುವ ಕಾರಣದಿಂದ ಆಯ್ಕೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ : ಬಯಲಾಯ್ತು ನಟಿ ರೆಂಜೂಷಾ ಮೆನನ್ ( Renjusha Menon) ಆತ್ಮಹತ್ಯೆ ರಹಸ್ಯ
ಈ ಬಾರಿ ಸಾಧಕರನ್ನು ಗುರುತಿಸಲು ಉಪಸಮಿತಿ ರಚಿಸಲಾಗಿದೆ. ಉಪಸಮಿತಿಗಳ ಮೂಲಕ ಅರ್ಜಿಯ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲಾಗಿದ್ದು, ಅಂತಿಮ ಪಟ್ಟಿಯನ್ನು ಆಯ್ಕೆ ಸಮಿತಿ ಮುಂದೆ ಇರಿಸಲಾಗಿದೆ. ಈ ನಡುವೆ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದರೂ, ಅರ್ಜಿ ಸಲ್ಲಿಸದ ಅರ್ಹತೆ ಇರುವವರನ್ನು ಆಯ್ಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರವೇ ಒಂದಿಷ್ಟು ಹೆಸರುಗಳನ್ನು ಗುರುತಿಸಿದ್ದು, ಆಯ್ಕೆಯಲ್ಲಿ ಆದ್ಯತೆ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.
ಅಪ್ರತಿಮ ಸೇವೆಗೈದು, ಎಲೆಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿದ್ರೆ ಪ್ರಶಸ್ತಿಗೊಂದು ( Kannada rajyotsava) ತೂಕ ಬರುತ್ತದೆ ಅನ್ನುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸದೇ ಇದ್ದವರಿಗೆ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಿದೆಯಂತೆ.
ಈ ನಡುವೆ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ( KARNATAKA) ಎಂದು ನಾಮಕರಣವಾಗಿ 50 ವರ್ಷಗಳು ಸಂದ ಹಿನ್ನಲೆಯಲ್ಲಿ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
Read this : Bigg Boss ಮನೆಗೆ ವರ್ತೂರು ಸಂತೋಷ್
- ಮನೆ ಮನೆಯಲ್ಲೂ ಕನ್ನಡದ ಬಾವುಟ ಹಾರಲಿ, ಕನ್ನಡ ಜೋತಿ ಬೆಳಗಲಿ ಎಂಬ ಆಶಯದೊಂದಿಗೆ ಈ ಬಾರಿಯ ರಾಜ್ಯೋತ್ಸವ ಆಚರಣೆ ಮನವಿ ಮಾಡಲಾಗಿದೆ. ಈ ಸಂಬಂಧ ಹಲವು ಸೂಚನೆಗಳನ್ನೂ ಕೂಡಾ ನೀಡಲಾಗಿದೆ.
- ಪ್ರತಿಯೊಬ್ಬ ಕನ್ನಡಿಗನ ಮನೆಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಯಲ್ಲಿ 50ರ ಸಂಭ್ರಮ ಎಂದು ಬಿಡಿಸೋದು
- ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯ ಬರೆಯುವಂತೆ ಮನವಿ.
- ನವೆಂಬರ್ 1 ರಂದು ಬೆಳಗ್ಗೆ 9ಗಂಟೆಗೆ ರಾಜ್ಯದ ಎಲ್ಲಾ ಆಕಾಶವಾಣಿಯಲ್ಲಿ ನಾಡಗೀತೆ ಪ್ರಸಾರ.
- ನಾಡ ಗೀತೆ ಸಂದರ್ಭದಲ್ಲಿ ರಾಜ್ಯದ ಜನ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ
- ನವೆಂಬರ್ 1 ರಂದು ಸಂಜೆ ಐದು ಗಂಟೆಗೆ ನಾಡಿನ ಜನರೆಲ್ಲರೂ ತಮ್ಮ ಗ್ರಾಮಗಳಲ್ಲಿ ಕನ್ನಡ ಬಾವುಟ ಉಳ್ಳ ಗಾಳಿಪಟ ಹಾರಿಸುವಂತೆ ಮನವಿ
- ಸಂಜೆ 7 ಗಂಟೆಗೆ ಎಲ್ಲಾ ಮನೆಗಳು, ಅಂಗಡಿ, ಕಚೇರಿಗಳ ಮುಂದೆ ದೀಪ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಲು ಮನವಿ
Discussion about this post