ಈ ಬಾರಿಯ ಪಿಯುಸಿ ಫಲಿತಾಂಶ ಘೋಷಣೆಯಾದ ವೇಳೆ ಸುಮಾರು 80 ಪಿಯು ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿತ್ತು. ಇದರಲ್ಲಿ 15 ಸರ್ಕಾರಿ ಕಾಲೇಜುಗಳೂ ಸೇರಿತ್ತು.
80 ಕಾಲೇಜುಗಳಲ್ಲಿ 100 ಶೇಕಡಾ ಫಲಿತಾಂಶ ನೋಡಿ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಕುರಿತಂತೆ ಜನ ಭೇಷ್ ಅಂದಿದ್ದರು.
ಆದರೆ ಶೇಕಡ ಫಲಿತಾಂಶ ಪಡೆದ ಕಾಲೇಜುಗಳತ್ತ ಕ್ಲೋಸ್ ಅಪ್ ಆಗಿ ನೋಡಿದ್ರೆ ಕಾಣಿಸಿದ ಅಸಲಿ ಸತ್ಯವೇ ಬೇರೆ. ಶೇ. 100 ಫಲಿತಾಶ ಪಡೆದ ಬಹುತೇಕ ಕಾಲೇಜುಗಳಲ್ಲಿ ಕೇವಲ 4 ರಿಂದ 10 ವಿದ್ಯಾರ್ಥಿಗಳಷ್ಟೇ ಪರೀಕ್ಷೆಗೆ ಬರೆದಿದ್ದರು..
ಪಿಯು ಇಲಾಖೆಯಿಂದ ಮಾಹಿತಿ ಪ್ರಕಾರ 80 ಕಾಲೇಜುಗಳ ಪೈಕಿ 18 ಕಾಲೇಜುಗಳಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರು. 80ರಲ್ಲಿ ಕೇವಲ 9 ಕಾಲೇಜುಗಳಲ್ಲಿ ಮಾತ್ರವೇ ನೂರಕ್ಕಿಂತ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಇನ್ನು ಶೂನ್ಯ ಫಲಿತಾಶ ಪಡೆದ ಕಾಲೇಜುಗಳ ವಿಚಾರದಲ್ಲೂ ಹೀಗೆ ಆಗಿದೆ. 98 ಕಾಲೇಜುಗಳು ಶೂನ್ಯ ಫಲಿತಾಂಶ ಸಾಧನೆ ಮಾಡಿದ್ದು, ಈ ಪೈಕಿ 48 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹತ್ತನ್ನು ದಾಟಿಲ್ಲ.
ಇನ್ನು ಕೆಲ ಕಾಲೇಜುಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಪರೀಕ್ಷೆ ತೆಗೆದುಕೊಂಡಿದ್ದು. ಮಂಡ್ಯದ ಮಳವಳ್ಳಿ ತಾಗಲ್ಪಾಡಿ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಇಬ್ಬರು, ಹಾಸನದ ಭುವನಗಿರಿಯಲ್ಲಿರುವ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ 4 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.
ನಿಯಮ ಪ್ರಕಾ ಒಂದು ಪಿಯು ಕಾಲೇಜು ಕಾರ್ಯಾಚರಣೆ ಮಾಡಲು ಕನಿಷ್ಟ 50 ವಿದ್ಯಾರ್ಥಿಗಳಿರಬೇಕು. ಆದರೆ ಇ ನಿಯಮವನ್ನು ಗಾಳಿಗೆ ತೂರಿ ಕಾಲೇಜುಗಳು ಕಾರ್ಯಾಚರಿಸುತ್ತಿರುವುದು ಈ ಫಲಿತಾಂಶ ಬಹಿರಂಗ ಪಡಿಸಿದೆ.
ಶಿಕ್ಷಣ ಇಲಾಖೆ ಇನ್ನಾದರೂ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲವಾದರೆ ಖಾಸಗಿ ಕಾಲೇಜುಗಳು ನಾಲ್ಕೈದು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಿಸಿ 100 ಶೇ ಫಲಿತಾಂಶ ಎಂದು ಬೀಗುತ್ತದೆ.
Discussion about this post