ಪ್ರವೀಣ್ ನೆಟ್ಟಾರು ಹತ್ಯೆಯ ಸಂಚುಕೋರರಿಗೆ ಆಶ್ರಯದ ಆರೋಪ
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಮುಸ್ತಫಾ ಪೈಚಾರ್ ಗೆ ಆಶ್ರಯ ನೀಡಿದ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ( NIA ) ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಿದೆ. ಮುಸ್ತಫಾ ಪೈಚಾರ್ ಮತ್ತು ರಿಯಾಜ್ ಎಚ್ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. NIA ಪ್ರಕರಣದ ತನಿಖೆ ಕೈಗೆತ್ತಿಕೊಂಡ ನಂತ್ರ 20222ರ ಆಗಸ್ಟ್ 4 ರಂದು ಪ್ರಕರಣವನ್ನು ಮರು ದಾಖಲಿಸಿಕೊಂಡಿತ್ತು.
ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈಗಾಗಲೇ 19 ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿದ್ದ ಆರೋಪಿ ಮುಸ್ತಫಾ ಪೈಚಾರ್ ನನ್ನು ಹಾಸನದ ಸಕಲೇಶಪುರದಲ್ಲಿ 2024ರ ಮೇ 10 ರಂದು ಬಂಧಿಸಲಾಗಿತ್ತು. ಅದೇ ದಿನ ಮನ್ಸೂರ್ ಪಾಷಾ ಎಂಬಾತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ : Xerox ನೋಟು ಕೊಟ್ಟು 25 ಲಕ್ಷ ರೂಪಾಯಿ ವಂಚನೆ
ಮುಸ್ತಫಾ ಪೈಚಾರ್ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ಎಂದು NIA ಹೇಳಿದ್ದು, ರಾಜ್ಯದಲ್ಲಿ ಪಿಎಫ್ಐ ತಂಡದ ಮಾಸ್ಟರ್ ಟ್ರೈನರ್ ಅನ್ನಲಾಗಿದೆ.
ತನಿಖೆಯ ಸಂದರ್ಭದಲ್ಲಿ ರಿಯಾಜ್ ಎಚ್.ವೈ ಎಂಬ ಮತ್ತೊಬ್ಬ ಆರೋಪಿಗೆ ಮುಸ್ತಫಾ ಪೈಚಾರ್ ಗೆ ಆಶ್ರಯ ನೀಡಿದ್ದು ಕಂಡು ಬಂದಿದ್ದು, ಈತ ಭಾರತದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ವೇಳೆ 2024ರ ಜೂನ್ 3 ರಂದು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ NIA ಬಂಧಿಸಿತ್ತು.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ 7 ಮಂದಿಯ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ.
The National Investigation Agency (NIA) has filed a supplementary chargesheet against two accused for harbouring Mustafa Paichar, the key conspirator in the murder of Praveen Nettaru, a BJP Yuva Morcha leader.