ಮೈಸೂರು : JDS ಮುಳುಗುತ್ತಿರುವ ಹಡಗು ಅನ್ನುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ರಾಜ್ಯದ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಅವರು ಬಿಜೆಪಿ ಸರ್ಕಾರ ಇರುವುದರಿಂದ ವಸೂಲಿಗೆ ಬರ್ತಾರೆ. ಅವರೊಬ್ಬ ಎಜೆಂಟ್.
ಈ ಹಿಂದೆ ಮೇಕೆ ದಾಟು, ಮಹಾದಾಯಿ ಬಗ್ಗೆ ದೊಡ್ಡ ದೊಡ್ಡ ಭರವಸೆಗಳನ್ನು ಅವರು ಕೊಟ್ರು. ಆದರೆ ಈಗ ದುಡ್ಡು ಕಲೆಕ್ಷನ್ ಗೆ ಬರ್ತಾರೆ. ನಾವೇನು ಅವರ ಮನೆ ಬಾಗಿಲಿಗೆ ಹೋಗಿಲ್ಲ. ಮೈಸೂರು ಮೇಯರ್ ಚುನಾವಣೆ ಸಂದರ್ಭದಲ್ಲಿ ಸಾರಾ ಮಹೇಶ್ ಮನೆ ಬಾಗಿಲಿಗೆ ಮಧ್ಯರಾತ್ರಿ ಬಂದಿದ್ದು ಬಿಜೆಪಿಯವರೇ.
ಕರ್ನಾಟಕ ಅಂದ್ರೆ ಅವರಿಗೆ ಗೊತ್ತಿದೆಯೇ, ಅರುಣ್ ಸಿಂಗ್ ಕಲೆಕ್ಷನ್ ಗಿರಾಕಿ.ರಾಜ್ಯ ಬಿಜೆಪಿ ನಾಯಕರು ಅರುಣ್ ಸಿಂಗ್ ಗೆ ರಾಜ್ಯದ ವಾಸ್ತವ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲಿ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವ ದಲ್ಲಾಳಿಗಳಿಗೆ ಜನ ಬೆಲೆ ಕೊಡುವುದಿಲ್ಲ. ಬಿಜೆಪಿಗೆ ಈಗಾಗಲೇ ಮುಳುಗುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು ಅಂದಿದ್ದಾರೆ.
ಹಾಗೇ ನೋಡಿದರೆ ಅರುಣ್ ಸಿಂಗ್ ಮಾತಿನಲ್ಲಿ ಸತ್ಯವಿದೆ, ಮಂಡ್ಯ ಮೈಸೂರು ಜೆಡಿಎಸ್ ಭದ್ರಕೋಟೆ ಅನ್ನುವುದು ಎಲ್ಲರಿಗೂ ಗೊತ್ತು, ಹಾಗಿದ್ದರೂ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಅಂದ್ರೆ ಅರ್ಥವೇನು. ಜೆಡಿಎಸ್ ಮುಳುಗುತ್ತಿದೆ, ಮುಳುಗುವುದನ್ನು ತಪ್ಪಿಸಲು ಬಿಜೆಪಿ ಕೈಹಿಡಿದಿದೆ ಅಂತಾ ತಾನೇ. ಇನ್ನು ಕುಮಾರಸ್ವಾಮಿ ಮಾತಿನಲ್ಲೂ ಸತ್ಯಾಂಶವಿದೆ, ಜೆಡಿಎಸ್ ಮುಳುಗುತ್ತಿರುವ ಹಡಗು ಎಂದಾದ ಮೇಲೆ ಸಾರಾ ಮಹೇಶ್ ಮನೆ ಬಾಗಿಲಿಗೆ ಹೋಗಿ ಮೇಯರ್ ಚುನಾವಣೆ ವಿಷಯದಲ್ಲಿ ಗೋಗರೆಯಬೇಕಾಗಿತ್ತಾ, ಮುಳುಗುತ್ತಿರುವ ಹಡಗು ಮುಳುಗಲಿ ಬಿಡಿ ಎಂದು ಬಿಟ್ಟು ಬಿಡಬೇಕಿತ್ತು.
BJP National General Secretary in charge of Karnataka Arun Singh described the Janata Dal (Secular) as a ‘sinking party’ while ruling out an alliance with any political entity in the State.
Discussion about this post