ಬೆಂಗಳೂರು : ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದೆ ಅನ್ನುವುದು ಪ್ರತಿಪಕ್ಷಗಳ ಆರೋಪ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಇದು ಹೌದು ಅನ್ನಿಸುತ್ತಿದೆ. ಒಂದಿಷ್ಟು ದಿನಗಳ ಹಿಂದೆ ತೀರಾ ಕಡಿಮೆಯಾಗಿದ್ದ ಟೆಸ್ಟಿಂಗ್ ಪ್ರಮಾಣ ಇದೀಗ ಏಕಾಏಕಿ ಏರಿಕೆಯಾಗಿದೆ. ರಾತ್ರಿ ಬೆಳಗಾಗುವುದರೊಳಗೆ ಟೆಸ್ಟಿಂಗ್ ಪ್ರಮಾಣ ಏರಿಸಿದ್ಯಾಕೆ ಅನ್ನುವುದೇ ಯಕ್ಷ ಪ್ರಶ್ನೆ.
ಈ ನಡುವೆ ಎರಡೂ ಡೋಸ್ ಲಸಿಕೆ ಪಡೆದಿರುವವರಿಗೆ ಹಂತ ಹಂತವಾಗಿ ಗ್ರೀನ್ ಪಾಸ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯಂತೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರೇ ಸ್ಪಷ್ಟನೆ ಕೊಟ್ಟಿದ್ದು, ಮೊದಲ ಹಂತದಲ್ಲಿ ಸರ್ಕಾರಿ ನೌಕರರಿಗೆ ಪಾಸ್ ನೀಡಲು ಚಿಂತನೆ ಮಾಡಲಾಗಿದೆ ಅಂದಿದ್ದಾರೆ.
ಈ ಗ್ರೀನ್ ಪಾಸ್ ಪಡೆದವರು, ಮಾಲ್, ಚಿತ್ರಮಂದಿರ ಹೀಗೆ ಎಲ್ಲಿಗೆ ಬೇಕಾದರೂ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ತೆರಳಬಹುದಾಗಿದೆ. ಮುಂದಿನ ದಿನಗಳಲ್ಲಿ ಮಾಲ್ ಚಿತ್ರಮಂದಿರ, ಪಬ್, ರೆಸ್ಟೊರೆಂಟ್, ಹೋಟೆಲ್, ಬಸ್, ಮೆಟ್ರೋ, ಮಾರುಕಟ್ಟೆ, ಧಾರ್ಮಿಕ ಸ್ಥಳ ಹೀಗೆ ಪ್ರತೀ ಕ್ಷೇತ್ರದ ಪ್ರವೇಶಕ್ಕೆ ಗ್ರೀನ್ ಪಾಸ್ ಕಡ್ಡಾಯ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ರೀತಿ ಗ್ರೀನ್ ಪಾಸ್ ಜಾರಿಗ ತಂದರೆ ಲಸಿಕೆ ಪಡೆಯದವರು ಲಸಿಕೆ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಸುವುದು ಸರ್ಕಾರದ ಉದ್ದೇಶ ಅನ್ನಲಾಗಿದೆ.
ಆದರೆ ಲಸಿಕೆ ಪಡೆದವರಿಗೆ ಈಗಾಗಲೇ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ದೊರೆಯುತ್ತಿರುವಾಗ ಇಂತಹುದೊಂದು ಪಾಸ್ ಅಗತ್ಯವಿದೆಯೇ ಅನ್ನುವುದು ಪ್ರಶ್ನೆ.
Discussion about this post