ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕೊರೋನಾ ನಿಯಂತ್ರಣ ಕಾರ್ಯಕ್ರಮದ ನಿಟ್ಟಿನಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದ ಸಚಿವ ಆರ್. ಅಶೋಕ್ ಅವರು ಕೊರೋನಾ ಸೋಂಕಿತರಾಗಿದ್ದಾರೆ. ಜ್ವರ, ಶೀತ ಹಾಗೂ ಸುಸ್ತಿನಿಂದ ಬಳಲುತ್ತಿದ್ದ ಅವರು ಕೊರೋನಾ ಪರೀಕ್ಷೆಗೆ ಒಳಗಾದ ವೇಳೆ ಪಾಸಿಟಿವ್ ವರದಿ ಬಂದಿದೆ.
ಇದೀಗ ಅಶೋಕ್ ಅವರ ಸಂಪರ್ಕಕ್ಕೆ ಬಂದ ಅಧಿಕಾರಿಗಳು ಮತ್ತು ಸಂಪುಟ ಸಹೋದ್ಯೋಗಿಗಳಿಗೂ ಕೊರೋನಾ ಆತಂಕ ಶುರುವಾಗಿದ್ದು, ಹಲವಾರು ಸಚಿವರು, ಅಧಿಕಾರಿಗಳು ಕ್ವಾರಂಟೈನ್ ಗೆ ಒಳಗಾಗಬೇಕಾಗಿದೆ. ಗಮನಾರ್ಹ ಅಂಶ ಅಂದ್ರೆ ಕೆಲ ದಿನಗಳ ಹಿಂದಷ್ಟೇ ಅರ್ ಅಶೋಕ್ ಜೊತೆಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಕೊರೋನಾ ಟಾಸ್ಕ್ ಫೋರ್ಸ್ ಸದಸ್ಯ ಹಾಗೂ ವೈರಲಾಜಿಸ್ಟ್ ರವಿಯವರು ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಈ ನಡುವೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಅಶೋಕ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಶೋಕ್ ಅವರಿಗೆ ತೀವ್ರ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ವಿಪರ್ಯಾಸ ಅಂದ್ರೆ ಕಂದಾಯ ಸಚಿವ ಆರ್ ಅಶೋಕ್ ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಉಳಿದವರಿಗೆ ಮಾದರಿಯಾಗಬೇಕಾಗಿತ್ತು. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ರೆ ಜನ ಸಾಮಾನ್ಯರಿಗೂ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆಯ ಬಗ್ಗೆ ನಂಬಿಕೆ ಬರುತ್ತಿತ್ತು. ಆದರೆ ಈ ಸಚಿವರಿಗೆ ಸರ್ಕಾರಿ ಆಸ್ಪತ್ರೆ ಆಲರ್ಜಿಯಾಗಿದ್ದು ಯಾಕೆ ಅನ್ನುವುದು ಯಕ್ಷ ಪ್ರಶ್ನೆ
Discussion about this post