ಪಠ್ಯ ಪರಿಷ್ಕರಣೆ ವಿವಾದದಿಂದ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆದರೆ ರಾಜಕಾರಣಿಗಳಿಗೆ ಇದರ ಪರಿವೆಯೇ ಇಲ್ಲದಂತಾಗಿದೆ
ಬೆಂಗಳೂರು : ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ವಿವಿಧ ವಲಯಗಳಿಂದ ಕೇಳಿ ಬಂದ ಆಕ್ಷೇಪಗಳಿಗೆ ಸ್ಪಂದಿಸಿರುವ ಸರ್ಕಾರ ಒಳ್ಳೆಯ ಕಾರ್ಯ ಮಾಡಿದೆ. ಈ ಹಿಂದೆ ಬರಗೂರು ಸಮತಿಯ ತಪ್ಪುಗಳ ಬಗ್ಗೆ ಆಕ್ಷೇಪ ಕೇಳಿ ಬಂದಾಗ ಸಿದ್ದರಾಮಯ್ಯ ಸರ್ಕಾರ ಸ್ಪಂದಿಸಿರಲಿಲ್ಲ ಅನ್ನುವುದನ್ನು ಇಲ್ಲಿ ಗಮನಿಸಬೇಕು.
ಬಸವಣ್ಣ, ಅಂಬೇಡ್ಕರ್, ಕುವೆಂಪು ಸೇರಿದಂತೆ ಅನೇಕ ವಿಚಾರಗಳ ಕುರಿತಂತೆ ಈ ಬಾರಿ ಆಕ್ಷೇಪ ಕೇಳಿ ಬಂದಿತ್ತು. ಕೆಲ ಸಂಘಟನೆಗಳು ವೈಯುಕ್ತಿಕ ಪ್ರತಿಷ್ಟೆಗಾಗಿ ಬೀದಿಗಿಳಿದಿತ್ತು. ಆದರೆ ಕೆಲ ಮಠಾಧೀಶರು ಹಾಗೂ ಸಂಘಟನೆಗಳು ಮೌಲ್ಯಯುತವಾದ ಆಕ್ಷೇಪಗಳನ್ನು ಎತ್ತಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿದ್ದು 8 ಬದಲಾವಣೆಗೆ ಸಮ್ಮಿತಿಸಿದೆ.
- 4ನೇ ತರಗತಿಯ ಪರಿಸರ ಅಧ್ಯಯನ ಪಾಠದಲ್ಲಿ ಅನೇಕರ ಪ್ರೋತ್ಸಾಹದಿಂದ ಇವರು ಕವಿಯಾದರು ಅನ್ನುವ ಸಾಲಿಗೆ ಕತ್ತರಿ ಹಾಕಿ, ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಸೇರಿಸಲಾಗಿದೆ. ಈ ಸಾಲುಗಳು ಬರಗೂರು ಸಮಿತಿ ಸಂದರ್ಭದ್ದು ಅನ್ನಲಾಗಿದೆ.
- 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1 ರಲ್ಲಿ ಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿ ವಿವಾದಗಳು ಎಂಬ ಫಾಠದಲ್ಲಿ ಕುವೆಂಪು ಹಾಗೂ ಹುಯಿಲಗೋಳ ನಾರಾಯಣ ರಾವ್ ಅವರ ಭಾವಚಿತ್ರ ಅಳವಡಿಕೆ
- 9ನೇ ತರಗತಿಯ ಸಮಾಜ ವಿಜ್ಞಾನ ಭಾಗ 1 ರಲ್ಲಿ ಭಾರತದ ಪರಿವರ್ತಕರು ಅನ್ನುವ ಅಧ್ಯಾಯದಲ್ಲಿ ಬಸವಣ್ಣನವರ ಕುರಿತ ಅಂಶಕ್ಕೆ ತಿದ್ದುಪದಿ
- 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1 ರಲ್ಲಿ ಸುರಪುರ ನಾಯಕರ ವಿವರಗಳ ಮರು ಸೇರ್ಪಡೆ
- 6 ನೇತರಗತಿಯ ಸಮಾಜ ವಿಜ್ಞಾನ ಭಾರ 1ರಲ್ಲಿ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿಯ ಮಠದ ಸೇವೆಯ ಸಾಲುಗಳ ಸೇರ್ಪಡೆ
- 7ನೇ ತರಗತಿಯ ಕನ್ನಡ ಪುಸ್ತಕದಲ್ಲಿ ತಪ್ಪಾಗಿ ಮುದ್ರಣಗೊಂಡಿದ್ದ ಡಾ.ಆರ್.ಎನ್.ಜಯಗೋಪಾಲ್ ಹೆಸರಿನ ಜಾಗಕ್ಕೆ ಚಿ ಉದಯಶಂಕರ್ ಹೆಸರು ಸೇರ್ಪಡೆ
- 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1 ರಲ್ಲಿ, ಭಕ್ತಿ ಪಂಥ ಹಾಗೂ ಸೂಫಿ ಸಂತರು ಅನ್ನುವ ಪಾಠವನ್ನು ಕೈ ಬಿಡಲಾಗಿತ್ತು. ಇದೀಗ ಪೂರ್ತಿ ಪಾಠವನ್ನು ಸೇರಿಸಲು ಸಮ್ಮತಿ
- 9ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ ನಮ್ಮ ಸಂವಿಧಾನ ಪಾಠದಲ್ಲಿ ಸಂವಿಧಾನ ಶಿಲ್ಪಿ ಅನ್ನುವ ಪದದ ಪುನರ್ ಬಳಕೆ
Discussion about this post