ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರ ಹೆಚ್ಚಾಗಿರುವ ಬೆನ್ನಲ್ಲೇ ತಡವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೊನೆಗೂ ತಜ್ಞರ ಸಮಿತಿಯ ಶಿಫಾರಸುಗಳನ್ನು ತಡವಾಗಿ ಜಾರಿಗೊಳಿಸಲು ಮುಂದಾಗಿದೆ.
ಈ ಹಿಂದೆ ತಜ್ಞರು ಲಾಕ್ ಡೌನ್ ಮಾಡಲೇಬೇಕು ಎಂದು ಶಿಫಾರಸ್ಸು ಮಾಡಿದ್ದರು. ಆದರೆ ಲಾಕ್ ಡೌನ್ ಅನ್ನು ಸೈಡಿಗಿಟ್ಟು ಸಲಹೆಗಳನ್ನು ಕೊಡಿ ಎಂದು ಸರ್ಕಾರ ತಜ್ಞರ ಸಮಿತಿಗೆ ಸೂಚಿಸಿತ್ತು. ಹೀಗಾಗಿ ಸಾಕಷ್ಟು ದಿನಗಳ ಹಿಂದೆ ಮತ್ತೊಮ್ಮೆ ಸಲ್ಲಿಕೆಯಾಗಿದ್ದ ವರದಿಯ ಸಲಹೆಯನ್ನು ಒಂದಿಷ್ಟು ತಿದ್ದುಪಡಿ ಮಾಡಿ ಜಾರಿಗೊಳಿಸಲಾಗುತ್ತಿದೆ.
ರಾಜ್ಯ ಸರ್ಕಾರದ ಇಂದಿನ ಆದೇಶದ ಪ್ರಕಾರ,ಈಗಾಗಲೇ 10 ರಿಂದ 5ರ ತನಕ ಇರುವ ಕೊರೋನಾ ಕರ್ಫ್ಯೂವನ್ನು ರಾತ್ರಿ 9 ರಿಂದ ಬೆಳಗ್ಗೆ 6ರ ತನಕ ವಿಸ್ತರಿಸಲಾಗಿದೆ.
ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಜಾರಿಗೊಳ್ಳಲಿದ್ದು ಈ ವೇಳೆ ಅಗತ್ಯ ವಸ್ತುಗಳ ಮಾರಾಟ ಬಿಟ್ಟು ಮತ್ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರೋದಿಲ್ಲ. ವೀಕೆಂಡ್ ಕರ್ಫ್ಯೂ ಸಂದರ್ಭ ಸಂಪೂರ್ಣ ಚಟುವಟಿಕೆಗಳು ಬಂದ್
ಇನ್ನುಳಿದಂತೆ ಫುಡ್ ಸ್ಟ್ರೀಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ, ಜಿಮ್, ಸ್ವಿಮ್ಮಿಂಗ್ ಫೂಲ್ ಗಳು ಸಂಪೂರ್ಣ ಬಂದ್. ಶಾಲಾ ಕಾಲೇಜುಗಳು ಸಂಪೂರ್ಣ ಬಂದ್, ಆನ್ ಲೈನ್ ತರಗತಿಗೆ ಅವಕಾಶ, ಧಾರ್ಮಿಕ ಕೇಂದ್ರಗಳು ಬಂದ್, ಕೇವಲ ಅರ್ಚಕರಿಗೆ ಮಾತ್ರ ಎಂಟ್ರಿ. ಮಸೀದಿ, ಚರ್ಚ್ ಗಳಿಗೂ ಸಾರ್ವಜನಿಕರ ಪ್ರವೇಶ ನಿರ್ಬಂಧ, ಮನಾರಂಜನಾ ಪಾರ್ಕ್ ಗಳು ಸಂಪೂರ್ಣ ಬಂದ್.
ಯಕ್ಷಗಾನ, ರಾಜಕೀಯ ಸಮಾವೇಶ ನಡೆಸುವ ಹಾಗಿಲ್ಲ, ಬಾರ್, ರೆಸ್ಟೋರೆಂಟ್ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಅಡಿಟೋರಿಯಂ, ಸಿನಿಮಾ ಹಾಲ್ ಗಳು ಸಂಪೂರ್ಣ ಬಂದ್, ಕೊರೋನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸಲೂನ್, ಬ್ಯೂಟಿಪಾರ್ಲರ್ ತೆರಯಲು ಅವಕಾಶ. ಮದುವೆ ಸಮಾರಂಭಗಳಿಗೆ 50 ಜನರಿಗೆ ಮಾತ್ರ ಅವಕಾಶ, ಅಂತಿಮ ಸಂಸ್ಕಾರಕ್ಕೆ 20 ಜನರ ಮಿತಿ.
ಹೇಳಿ ಕೇಳಿ ಇದು ಯಡಿಯೂರಪ್ಪ ಸರ್ಕಾರದ ಆದೇಶ, ಈ ಆದೇಶಕ್ಕೆ ನಾಳೆ ಒಂದಿಷ್ಟು ತಿದ್ದುಪಡಿ ಬಂದರೂ ಅಚ್ಚರಿ ಇಲ್ಲ. ಮೇ4ರ ತನಕ ಈ ಆದೇಶ ಜಾರಿಯಲ್ಲಿರಲ್ಲಿದ್ದು, ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಹೊಸ ಆದೇಶ ಹೊರ ಬೀಳಲಿದೆ.
Discussion about this post