ಈ ಪ್ರಕರಣವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕೂಡಾ ಸಂಪೂರ್ಣವಾಗಿ ಎಡವಿದೆ ಅನ್ನುವುದು ಸ್ಪಷ್ಟ. ವಿವಾದ ಪ್ರಾರಂಭವಾದ ಮೊದಲ ದಿನವೇ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶ ಕೊಟ್ಟಿರುತ್ತಿದ್ರೆ
ಬೆಂಗಳೂರು : ಕೇವಲ 6 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಹಿಜಬ್ ವಿವಾದ 18 ಜಿಲ್ಲೆಗಳ 54 ಕಾಲೇಜುಗಳಿಗೆ ಹರಡಿದೆ. ಇಡೀ ಪ್ರಕರಣದ ಅವಲೋಕನ ನಡೆಸಿದರೆ ವ್ಯವಸ್ಥಿತವಾದ ಷಡ್ಯಂತ್ಯ ಇದರ ಹಿಂದೆ ಇದೆ ಅನ್ನುವುದು ಸ್ಪಷ್ಟ. ಸಾಕಷ್ಟು ಪೂರ್ವ ಸಿದ್ದತೆ ಹಾಗೂ ವಿವಿಧ ಹಂತದ ಯೋಜನೆಗಳು ಕೂಡಾ ಇದರ ಹಿಂದೆ ಇದೆ ಅನ್ನುವುದರಲ್ಲಿ ಅನುಮಾನವಿಲ್ಲ. ಇನ್ನು ಇದಕ್ಕೆ ಕೆಲ ಸ್ವಯಂ ಘೋಷಿತ ಪ್ರಗತಿಪರರು ಕೂಡಾ ತುಪ್ಪ ಸುರಿದರು. ರಾಜಕೀಯವಾಗಿ ನಿರಾಶ್ರಿತರಾದವರು ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡಿದರು.
ಇನ್ನು ಈ ಪ್ರಕರಣವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕೂಡಾ ಸಂಪೂರ್ಣವಾಗಿ ಎಡವಿದೆ ಅನ್ನುವುದು ಸ್ಪಷ್ಟ. ವಿವಾದ ಪ್ರಾರಂಭವಾದ ಮೊದಲ ದಿನವೇ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶ ಕೊಟ್ಟಿರುತ್ತಿದ್ರೆ, ಇಷ್ಟು ಹೊತ್ತಿಗೆ ಖಾಕಿ ಪಡೆ ಹಲವು ಮಂದಿಯ ಹೆಡೆಮುರಿ ಕಟ್ಟಿರುತ್ತಿತ್ತು. ಆದರೆ ರಾಜಕೀಯ ಲೆಕ್ಕಚಾರದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಇದೀಗ ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ತನಿಖೆಗೆ ಆದೇಶಿಸಿದೆ. ಕನಿಷ್ಟ ಪಕ್ಷ ತಮ್ಮ ಸಂಪುಟದ ಸಚಿವರಿಗೆ ಶಾಸಕರಿಗೆ ಬಾಯಿ ಮುಚ್ಚಿಕೊಂಡಿರುವಂತೆ ಸೂಚಿಸಿದ್ರೆ ಸಾಕಿತ್ತು.
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಹಿಜಾಬ್ ಸಂಘರ್ಷದ ಹಿಂದೆ SDPI ಬೆಂಬಲಿತ CFI ಕೈವಾಡದ ಮಾಹಿತಿ ಇದೆ ಅಂದಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಎಲ್ಲವೂ ಗೊತ್ತಾಗಲಿದೆ ಅಂದಿದ್ದಾರೆ.
Discussion about this post