ಎಸಿಬಿಯ ( anti corruption bureau bangalore ) ಕಾರ್ಯವೈಖರಿ ಬಗ್ಗೆ ಜನರಿಗೆ ಸಾಕಷ್ಟು ಅನುಮಾನಗಳಿತ್ತು. ಇದೀಗ ಹೈಕೋರ್ಟ್ ( karnataka high court ACB) ಈ ಬಗ್ಗೆ ಗಮನ ಹರಿಸಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದೆ
ಬೆಂಗಳೂರು : ಎಸಿಬಿ ಕಾರ್ಯವೈಖರಿಗೆ ಸಂಬಂಧಿಸಿದಂತೆ (karnataka high court ACB) ಹೈಕೋರ್ಟ್ ಮತ್ತೆ ಚಾಟಿ ಬೀಸಿದೆ. ಕಳೆದ ಕೆಲವು ದಿನಗಳಿಂದ ಈ ಸಂಬಂಧ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ( HP Sandesh ) ಇವತ್ತು ಕೂಡಾ ಕೆಂಡಮಂಡಲರಾಗಿದ್ದಾರೆ.
ಎಸಿಬಿ ಈ ತನಕ ಹಾಕಿರುವ ಬಿ ರಿಪೋರ್ಟ್ ಗಳ ಬಗ್ಗೆ ವಕೀಲರು ನೀಡಿದ ವರದಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ಸಹಿ ಇಲ್ಲದ ಅಪೂರ್ಣ ಮಾಹಿತಿಯನ್ನು ನೋಡಿ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಎಸಿಬಿ ಪರ ವಕೀಲರು 99 ಬಿ ರಿಪೋರ್ಟ್ ಗಳ ಮಾಹಿತಿ ಕೊಟ್ಟಿದ್ದಾರೆ. ಬಳಿಕ ಆ ಸಂಖ್ಯೆ 105ಕ್ಕೆ ಏರಿತು.
ಆಗ ಅಸಮಾಧಾನಗೊಂಡ ನ್ಯಾಯಾಧೀಶರು, ನಾನು ಪದೇ ಪದೇ ಎಸಿಬಿಗೆ ಹೇಳಬೇಕಾ, ಸರಿಯಾಗಿ ಮಾಹಿತಿಯನ್ನು ಯಾಕೆ ಕೊಡುತ್ತಿಲ್ಲ. ನನಗೆ ಆಟ ಆಡುತ್ತಿರುವ ಬಗ್ಗೆ ಎಲ್ಲವೂ ಗೊತ್ತಿದೆ. 2022ರ ಬಿ ರಿಪೋರ್ಟ್ ಗಳು ಎಲ್ಲಿದೆ. ADGP ರಕ್ಷಿಸಲು ಬಿ ರಿಪೋರ್ಟ್ ಮಾಹಿತಿ ನೀಡಿಲ್ಲ. ಮಾರ್ಚ್ ಜೂನ್ ತಿಂಗಳಲ್ಲಿ ಬಿ ರಿಪೋಟ್ ಸಲ್ಲಿಸಲಾಗಿದೆ. ನೀವು ಹೀಗೆ ಆಟವಾಡುತ್ತಿರುವುದು ಗೊತ್ತಿದ್ದು ಈ ಮಾಹಿತಿಗಳನ್ನು ಕೇಳಲಾಗಿದೆ.ಲಂಚದ ಹಣದೊಂದಿಗೆ ಸಿಕ್ಕಿ ಬಿದ್ದ ಸಂದರ್ಭದಲ್ಲೂ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ನಿಜವಾದ ಮಾಹಿತಿಯನ್ನೇ ಎಸಿಬಿ ಹೈಕೋರ್ಟ್ ಗೆ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ( HP Sandesh ) ಗರಂ ಆಗಿದ್ದಾರೆ.
ಈ ನಡುವೆ ಎಫ್ ಐ ಆರ್ ರದ್ದು ಕೋರಿ ಐಎಎಸ್ ಅಧಿಕಾರಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ. ಪೊಲೀಸ್ ನೇಮಕಾತಿ ಹಗರಣದ ಪ್ರಕರಣದ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಲಾಗಿದೆ.
ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ : ರವಿಕಾಂತೇಗೌಡ ಸೂಚನೆ
ಬೆಂಗಳೂರು ಟ್ರಾಫಿಕ್ ಪೊಲೀಸರ ( bengaluru traffic police) ಲಂಚಾವತಾರ ಪ್ರಕರಣ ಸುದ್ದಿ ವಾಹಿನಿಗಳ ಸ್ಟಿಂಗ್ ಆಪರೇಷನ್ ನಲ್ಲಿ ಬೆತ್ತಲಾಗಿದೆ. ಈ ನಡುವೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ( ( Ravikanthe gowda ips ) ಪಿಯುಸಿ ಮಕ್ಕಳಿಗೆ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಬೆಂಗಳೂರು : ರಾಜಧಾನಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರು ಇನ್ನಿಲ್ಲದ ಶ್ರಮ ಹಾಕುತ್ತಿದ್ದಾರೆ. ಸುಗಮ ಸಂಚಾರಕ್ಕಾಗಿ ಶಿಸ್ತಿನಿಂದ ದುಡಿಯುವ ಅಧಿಕಾರಿಗಳು ಬೆಂಗಳೂರು ಟ್ರಾಫಿಕ್ ಪೊಲೀಸ್ ಟೀಂ ನಲ್ಲಿದ್ದಾರೆ. ಆದರೆ ಇವರ ಕೆಲಸವನ್ನು ಕೆಲ ಭ್ರಷ್ಟ ಟ್ರಾಫಿಕ್ ಇನ್ಸ್ ಪೆಕ್ಟರ್ ಗಳು, ಲಂಚಬಾಕ ಟ್ರಾಫಿಕ್ ವಿಭಾಗದ ಎಸಿಪಿಗಳು ಹಾಳು ಮಾಡುತ್ತಿದ್ದಾರೆ.
ಈ ನಡುವೆ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚಿಸಿದ್ದಾರೆ. ಪಿಯು ವಿದ್ಯಾರ್ಥಿಗಳಿಗೆ ಡ್ರೈವಿಂಗ್ ಲೈಸೆನ್ಸ್ ( Driving licence ) ಪಡೆಯುವ ಪ್ರಾಯವೇ ಆಗಿರುವುದಿಲ್ಲ. ಹೀಗಾಗಿ ಪಿಯುಸಿ ವಿದ್ಯಾರ್ಥಿಗಳು ಬೈಕ್ ಅಥವಾ ಸ್ಕೂಟರ್, ಕಾರು ಚಲಾಯಿಸಿಕೊಂಡು ಬರೋ ಹಾಗಿಲ್ಲ ಅಂದಿದ್ದಾರೆ. ( ಡುಮ್ಕಿ ಸಾಧಕರಿದ್ರೆ ಅವರಿಗೆ ಲೈಸೆನ್ಸ್ ಆಗಿದ್ರೆ ಅವರು ವಾಹನ ಚಾಲನೆ ಮಾಡಲು ಅರ್ಹರಾಗಿರುತ್ತಾರೆ)
ಬೆಂಗಳೂರಿನಲ್ಲಿ ಮಾತನಾಡಿದ ರವಿಕಾಂತೇಗೌಡ, ವಿದ್ಯಾರ್ಥಿಗಳ ಸೇಫ್ ದೃಷ್ಟಿಯಿಂದ ಪೋಷಕರು ಕೂಡಾ ಈ ಬಗ್ಗೆ ಗಮನಹರಿಸಬೇಕು ಅಂದಿದ್ದಾರೆ.
ಇದೇ ವೇಳೆ ಡ್ರಿಂಕ್ ಅಂಡ್ ಡ್ರೈವ್ ಬಗ್ಗೆ ಮಾಹಿತಿ ನೀಡಿರುವ ಅವರು ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಕುಡಿದು ವಾಹನ ಚಲಾಯಿಸಿ ವಾಹನ ಅಪಘಾತ ಮಾಡಿದ ಪ್ರಮಾಣ ಕಡಿಮೆಯಾಗಿದೆ. ಆದರೆ ಜೂನ್ ತಿಂಗಳಲ್ಲಿ ನಡೆದ ಅಫಘಾತಗಳಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಅತೀ ಹೆಚ್ಚು ಡ್ರಿಂಕ್ ಅಂಡ್ ಡ್ರೈವ್ ಮಾಡಿದವರೇ. ಹೀಗಾಗಿಯೇ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಡ್ರೈವ್ ಮುಂದುವರಿಯಲಿದೆ ಅಂದಿದ್ದಾರೆ.
ಇನ್ನು ಡ್ರಿಂಕ್ ಅಂಡ್ ಡ್ರೈವ್ ಸಂದರ್ಭದಲ್ಲಿ ಪೊಲೀಸರಿಗೆ ದಂಡ ಸಂಗ್ರಹಿಸುವ ಅಧಿಕಾರವಿಲ್ಲ. ಅದನ್ನು ನ್ಯಾಯಾಲಯದಲ್ಲೇ ಕಟ್ಟಬೇಕು. ಜೊತೆಗೆ ಡ್ರಿಂಕ್ ಅಂಡ್ ಡ್ರೈವ್ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡ್ರೆ ಜೊತೆಗಿದ್ದವರು ಕುಡಿಯದೇ ಇದ್ದು, ಅವರು ವಾಹನ ಚಲಾವಣೆಗೆ ಅರ್ಹತೆ ಹೊಂದಿದ್ದರೆ, ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳುವುದಿಲ್ಲ. ವಾಹನ ಸವಾರ ಅಥವಾ ಚಾಲಕ ಒಬ್ಬನೇ ಇದ್ದ ಸಂದರ್ಭದಲ್ಲಿ ಪೊಲೀಸರು ವಾಹನ ವಶಪಡಿಸಿಕೊಳ್ಳುತ್ತಾರೆ ಎಂದು ಇದೇ ಸಂದರ್ಭದಲ್ಲಿ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
Discussion about this post