ಬೆಂಗಳೂರು : ಭ್ರಷ್ಟಚಾರದ ಕೂಪವಾಗಿದೆ ಅನ್ನುವ ಆರೋಪಕ್ಕೆ ಒಳಗಾಗಿರುವ ಡಿಸಿಸಿ ಬ್ಯಾಂಕ್ ಗಳನ್ನು ಮುಚ್ಚಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಸ್ಪಷ್ಟ ಸೂಚನೆಯೂ ಬಂದಿದೆ. ಈ ಸಂಬಂಧ ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆಯನ್ನು ಕೂಡಾ ನಡೆಸಿದ್ದು, ಬ್ಯಾಂಕ್ ಬಂದ್ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮಾತ್ರವಲ್ಲದೆ ಈ ಬಗ್ಗೆ ಅಧ್ಯಯನ ನಡೆಸಲು ಕೇರಳ ಮತ್ತು ಛತ್ತೀಸ್ ಗಢ್ ಗೆ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡಲಾಗಿದ್ದು, ಅಧಿಕಾರಿಗಳ ವರದಿ ಬಳಿಕ ಬಂದ್ ಪ್ರಕ್ರಿಯೆ ಕಾರ್ಯರೂಪಕ್ಕೆ ಬರಲಿದೆ.
ಈ ಬಗ್ಗೆ ವಿಧಾನಪರಿಷತ್ತಿನಲ್ಲಿ ಮಾಹಿತಿ ನೀಡಿರುವ ಸಹಕಾರಿ ಸಚಿವ ಸೋಮಶೇಖರ್, ಅಧಿಕಾರಿಗಳ ವರದಿ ಬಂದ ಬಳಿಕ ರಾಜ್ಯಕ್ಕೆ ಎಷ್ಟರ ಮಟ್ಟಿಗೆ ಅನುಕೂಲ ಅನ್ನುವ ಬಗ್ಗೆ ಚರ್ಚೆ ನಡೆಸಲಾಗುವುದು. ಜೊತೆಗೆ ಕೇಂದ್ರಕ್ಕೆ ಈ ಬಗ್ಗೆ ವರದಿ ಸಲ್ಲಿಸಿ, ಅಲ್ಲಿಂದ ಬರುವ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಅಂದಿದ್ದಾರೆ.
ಮಾಹಿತಿಗಳ ಪ್ರಕಾರ ಅಮಿತ್ ಶಾ ಅವರು ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಕ್ರಾಂತಿಗೆ ನಿರ್ಧರಿಸಿದ್ದು, ಈ ಸಂಬಂಧ ಡಿಸಿಸಿ ಬ್ಯಾಂಕ್ ಮುಚ್ಚಲು ತೀರ್ಮಾನಿಸಲಾಗಿದೆ. ಶಾ ಅವರ ಈ ಯೋಜನೆ ಹಾಗೂ ಯೋಚನೆಯ ಹಿಂದಿರುವ ಕಾರಣ, ಚುನಾವಣೆಯೂ ಮುನ್ನ ಡಿಸಿಸಿ ಬ್ಯಾಂಕ್ ಗಳು ಬಂದ್ ಆಗಲಿದ್ದು, ಅಪೆಕ್ಸ್, ಪತ್ತಿನ ಸಂಘ ಉಳಿದುಕೊಳ್ಳಲಿದೆ ಅನ್ನಲಾಗಿದೆ.
Discussion about this post