ಬೆಂಗಳೂರು : ಎಂದಿನಂತೆ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಡವಟ್ಟು ನಿರ್ಧಾರವೊಂದನ್ನು ಯಡಿಯೂರಪ್ಪ ಸರ್ಕಾರ ಕೈಗೊಂಡಿದೆ. ಕೊರೋನಾ ಸೋಂಕಿನ ಎರಡನೆ ಅಲೆ ಪ್ರಾರಂಭದಲ್ಲೇ ಈ ನಿರ್ಧಾರ ಕೈಗೊಂಡಿದ್ರೆ ಇದು ಯಡವಟ್ಟಿನ ನಿರ್ಧಾರವಾಗುತ್ತಿರಲಿಲ್ಲ.
ಎರಡನೆ ಅಲೆಯ ಪ್ರಾರಂಭದಲ್ಲಿ ಕೊರೋನಾ ನಿಯಂತ್ರಣ ಸಲುವಾಗಿ ಇರುವ ತಜ್ಞರ ಸಮಿತಿ ಹಲವು ಶಿಫಾರಸುಗಳನ್ನು ಕೊಟ್ಟಿತ್ತು. ಆದರೆ ಆಗ ಸವಿ ನಿದ್ದೆಯಲ್ಲಿದ್ದ ರಾಜ್ಯ ಸರ್ಕಾರ ಇಂದು ಏಕಾಏಕಿ ಮೈ ಕೊಡವಿ ನಿಂತಿದೆ. ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಸೀಟು ಭರ್ತಿ, 6 ರಿಂದ 9ನೇ ತರಗತಿ ತನಕ ಶಾಲೆ ಬಂದ್, ವರ್ಕ್ ಫ್ರಂ ಹೋಮ್, ಜಿಮ್, ಈಜುಕೊಳ ಬಂದ್ ಹೀಗೆ ಹಲವು ಕಠಿಣ ಕ್ರಮಗಳನ್ನು ಏಕಾಏಕಿ ಕೈಗೊಂಡಿದೆ.
ಈಗಾಗಲೇ ಕೊರೋನಾ ಮಹಾಮಾರಿಯ ಮೊದಲ ಅಲೆಯ ಕಾರಣದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಏಕಾಏಕಿ ಕಠಿಣ ನಿಯಮಗಳನ್ನು ಹೇರಿದ್ರೆ ಜನ ದುಡಿದು ತಿನ್ನುವುದಾದರೂ ಹೇಗೆ,
ಫಿಲ್ಮಂ ಥಿಯೇಟರ್ ಗಳಲ್ಲಿ ಮೊದಲೇ 50% ಸೀಟು ಭರ್ತಿಗೆ ಅವಕಾಶ ಕೊಟ್ಟಿದ್ರೆ ಈ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಒಂದು ಸಲ ಶೇ 100 ಸೀಟು ಭರ್ತಿ ಮಾಡಲು ಅವಕಾಶ ಕೊಟ್ಟು, ಈಗ ಅದನ್ನು ತಡೆಯೋದು ಯಾವ ನ್ಯಾಯ.
ಹೋಗ್ಲಿ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆಯಲ್ಲ, ಅಲ್ಲಿ ಸರ್ಕಾರದ ಮಂತ್ರಿ ಮಾಗಧರು ಪಾಲ್ಗೊಂಡಿದ್ರಲ್ಲ, ಎಲ್ಲಾದರೂ ಕೊರೋನಾ ನಿಯಮ. ಮಾಸ್ಕ್, ಸಾಮಾಜಿಕ ಅಂತರ ಕಾಣಿಸಿಕೊಂಡಿತ್ತೇ. ಅದ್ಯಾವ ಮಾಜಿ, ಹಾಲಿಗಳು ಮಾಸ್ಕ್ ಹಾಕಿಕೊಂಡಿದ್ರು.
ಈ ಎಲ್ಲಾ ನಿಯಮಗಳನ್ನು ಜಾರಿಗೆ ತರುವ ಮುನ್ನ ಮೊದಲು ಬೈ ಎಲೆಕ್ಷನ್ ಕ್ಯಾಂಪೇನ್ ಗೆ ಬ್ರೇಕ್ ಹಾಕಿ. ಆಮೇಲೆ ಈ ರೂಲ್ಸ್ ಗಳನ್ನು ತನ್ನಿ ಆಗ ಜನ ಮೆಚ್ಚುತ್ತಾರೆ.
Discussion about this post