ಬೆಂಗಳೂರು : ದೇಶಕ್ಕೆ ಮಾಡೆಲ್ ಅನ್ನಿಸಿಕೊಂಡಿದ್ದ ಕೇರಳದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದೆ. ಈ ನಡುವೆ ಕರ್ನಾಟಕ ಗಡಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಹಾಗಂತ ನಿಟ್ಟುಸಿರುಬಿಡುವ ಹಾಗಿಲ್ಲ. ಒಂದು ದಿನ ಸಂಖ್ಯೆ ಕಡಿಮೆಯಾದರೆ ಮತ್ತೊಂದು ದಿನ ಏರಿಕೆಯಾಗುತ್ತದೆ.
ಆಗಸ್ಟ್ 30ರಂದು ರಾಜ್ಯದಲ್ಲಿ 973 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು, ಇದು ನೆಮ್ಮದಿಯ ವಿಚಾರ ಅಂದುಕೊಂಡರೆ, ಆಗಸ್ಟ್ 31 ರಂದು ಈ ಸಂಖ್ಯೆ 1217ಕ್ಕೆ ಏರಿದೆ. ಏಕಾಏಕಿ ಈ ಸಂಖ್ಯೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಹೋಗ್ಲಿ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಯಾಕೆ ಅನ್ನುವ ಬಗ್ಗೆ ಅಧ್ಯಯನವನ್ನಾದರೂ ಆರೋಗ್ಯ ಇಲಾಖೆ ನಡೆಸಬೇಕು ತಾನೇ.
ಈ ನಡುವೆ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿದ್ದು, 6 ರಿಂದ 8ನೇ ತರಗತಿಗಳಿಗೆ ಭೌತಿಕ ತರಗತಿ ತೆರೆಯಲು ಅನುಮತಿ ನೀಡಲಾಗಿದೆ. ಶಾಲೆ ತೆರೆಯುವ ಹೊತ್ತಿನಲ್ಲಿ ಸೋಂಕಿತರ ಸಂಖ್ಯೆ ಏರಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
Discussion about this post