ವಾರಾಂತ್ಯದ ಕರ್ಫ್ಯೂ ತೆರವು ಬೇಡ ಎಂದು ಬಿಬಿಎಂಪಿ ಪಟ್ಟು ಹಿಡಿದಿತ್ತು. ನಗರದ ಹಲವು ವಾರ್ಡ್ ಗಳಲ್ಲಿ ಸೋಂಕಿನ ಅಬ್ಬರ ನಿಯಂತ್ರಿಸಲಾಗದ ಹಂತ ತಲುಪಿದೆ ಅನ್ನುವುದು BBMP ಅಧಿಕಾರಿಗಳ ಆತಂಕ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗುತ್ತಿದೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲೂ ಬೆಂಗಳೂರಿನ 101 ವಾರ್ಡ್ ಗಳಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳಿದ್ದು, 33 ವಾರ್ಡ್ ಗಳಲ್ಲಿ ಈ ಸಂಖ್ಯೆ ಸಾವಿರದ ಗಡಿ ದಾಟಿದೆ.
ಸಾವಿರಕ್ಕೂ ಹೆಚ್ಚು ಪ್ರಕರಣಗಳಿರುವ ವಾರ್ಡ್
ಹೂಡಿ, ಹೊಯ್ಸಳ ನಗರ, ಬೇಗೂರು, ಬಾಣಸವಾಡಿ, ಹಗದೂರು, ಬೆಳ್ಳಂದೂರು, ಕೊಟ್ಟಿಗೆ ಪಾಳ್ಯ, ಅರಕೆರೆ, ದೊಡ್ಡನೆಕ್ಕುಂದಿ, ಕೊನೇನ ಅಗ್ರಹಾರ, ಆರ್ ಆರ್ ನಗರ, ಅಟ್ಟೂರು, ವಿದ್ಯಾರಣ್ಯಪುರ, ವಸಂತಪುರು, ವರ್ತೂರು, ಜ್ಞಾನಭಾರತಿ, ಕೆಂಪೇಗೌಡ ವಾರ್ಡ್, ಹೆಮ್ಮಿಗೆಪುರ, ಶಾಂತಲಾನಗರ, ಉತ್ತರಹಳ್ಳಿ.
ಇನ್ನುಳಿದಂತೆ ಕುವೆಂಪುನಗರ, ಶೆಟ್ಟಿಹಳ್ಳಿ, ಬಗಲಗುಂಟೆ, ಅರಮನೆ ವಾರ್ಡ್, ಚೊಕ್ಕಸಂದ್ರ, ದೊಡ್ಡ ಬಿದರಕಲ್ಲು,ರಾಧಾಕೃಷ್ಣ ಟೆಂಪಲ್ ವಾರ್ಡ್, ಸಂಜಯನಗರ, ಗರುಡಚಾರ್ ಪಾಳ್ಯ, ಕಾಡುಗೋಡಿ, ಮಾರತಹಳ್ಳಿ, ಜೀವನ್ ಭೀಮಾ ನಗರ, ವಸಂತನಗರ, ಗಾಂಧಿನಗರ, ದೊಮ್ಮಲೂರು, ಆಡುಗೋಡಿ, ಸದ್ದುಗುಂಟೆ ಪಾಳ್ಯ, ಕೆಂಗೇರಿ, BTM ಲೇ ಜೌಟ್, ಪಾದರಾಯನಪಾಳ್ಯ, ಜೆಪಿ ನಗರ, ಬಿಳೇಕಹಳ್ಳಿ, ಪುಟ್ಟೇನಹಳ್ಳಿ ಸೇರಿ 66ವಾರ್ಡ್ ಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ.
ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ವಾರಾಂತ್ಯ ಕರ್ಫ್ಯೂ ತೆರವು ಬೇಡ ಎಂದು ಬಿಬಿಎಂಪಿ ಅಧಿಕಾರಿಗಳು ಪಟ್ಟು ಹಿಡಿದಿದ್ದರು. ಜನ ಈಗಾಗಲೇ ನಿಯಮಗಳನ್ನು ಪಾಲಿಸುತ್ತಿಲ್ಲ. ಕನಿಷ್ಟ ವೀಕೆಂಡ್ ಕರ್ಫ್ಯೂ ಇದ್ರೆ ಜನ ಸೇರುವುದು ತಪ್ಪುತ್ತದೆ ಅನ್ನುವುದು ಅಧಿಕಾರಿಗಳ ಲೆಕ್ಕವಾಗಿತ್ತು. ಆದರೆ ರಾಜಕೀಯ ಲಾಭದ ಲೆಕ್ಕಚಾರದಲ್ಲಿದ್ದ ರಾಜ್ಯ ಸರ್ಕಾರ, ಕೊರೋನಾ ಎರುತ್ತಿರುವ ಸಂದರ್ಭದಲ್ಲೇ ಎಲ್ಲವನ್ನೂ ಮುಕ್ತ ಮಾಡಿದೆ.
Discussion about this post