ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಹಾವು ಏಣಿಯಾಟ ಮುಂದುವರಿದಿದೆ. ಇಂದು 1229 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 4 ಜಿಲ್ಲೆಗಳಲ್ಲಿ ಶೂನ್ಯ, 6 ಜಿಲ್ಲೆಗಳಲ್ಲಿ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.
ಆರೋಗ್ಯ ಇಲಾಖೆ ವರದಿಗಳ ಪ್ರಕಾರ ಇಂದು 1289 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ18897ಕ್ಕೆ ಕುಸಿದಿದೆ. ಇನ್ನು ರಾಜ್ಯದ ಪಾಸಿಟಿವಿಟಿ ದರ 0.66% ದಾಖಲಾಗಿದ್ದು ಡೆತ್ ರೇಟ್ 1.05% ನಷ್ಟಿದೆ.
ಇನ್ನು ಇಂದು ಬಾಗಲಕೋಟೆ, ಬೀದರ್, ರಾಯಚೂರು ಮತ್ತು ಯಾದಗಿರಿಯಲ್ಲಿ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಇನ್ನುಳಿದಂತೆ ಬಳ್ಳಾರಿ-5, ಬೆಳಗಾವಿ-29, ಬೆಂಗಳೂರು ಗ್ರಾಮಾಂತರ-15, ಬೆಂಗಳೂರು ನಗರ-310, ಚಾಮರಾಜನಗರ-7, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-35, ಚಿತ್ರದುರ್ಗ-15, ದಕ್ಷಿಣ ಕನ್ನಡ-207, ದಾವಣಗೆರೆ-12, ಧಾರವಾಡ-7, ಗದಗ-2, ಹಾಸನ-103, ಹಾವೇರಿ-3, ಕಲಬುರಗಿ-2, ಕೊಡಗು-75, ಕೋಲಾರ-15, ಕೊಪ್ಪಳ-2, ಮಂಡ್ಯ-21, ಮೈಸೂರು-82, ರಾಮನಗರ-3, ಶಿವಮೊಗ್ಗ-42, ತುಮಕೂರು-44, ಉಡುಪಿ-146, ಉತ್ತರ ಕನ್ನಡ-42, ವಿಜಯಪುರದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಬೆಂಗಳೂರು ಗ್ರಾಮಾಂತರ 1. ಚಾಮರಾಜನಗರ 1. ದಕ್ಷಿಣಕನ್ನಡ 5, ಹಾಸನ 2, ಹಾವೇರಿ 1, ಕೋಲಾರ 1, ಶಿವಮೊಗ್ಗ 1, ಉಡುಪಿ 1 ಸೇರಿ ರಾಜ್ಯದಲ್ಲಿ ಇಂದು 13 ಸೋಂಕಿತರು ಮೃತಪಟ್ಟಿದ್ದಾರೆ.
Discussion about this post