ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಲು ತೆರಳಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಸಿಎಂ ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ.
ಕಳೆದ ಸೋಮವಾರ ರಾತ್ರಿ ಐಟಿ ಇಲಾಖೆಯ ಅಧಿಕಾರಿಗಳ ತಂಡ ಸಿಎಂ ತಂಗಿದ್ದ ಹುಬ್ಬಳ್ಳಿಯ ಡೆನ್ನಿಸನ್ ಅಂಡ್ ಕಾಟನ್ ಕೌಂಟಿ ಹೊಟೇಲ್ ನ 6ನೇ ಮಹಡಿಗೆ ಹೋಗಿದ್ದಾರೆ.
ಆ ವೇಳೆ ಐಟಿ ಅಧಿಕಾರಿಗಳನ್ನು ತಡೆದ ಸಿಎಂ ಭದ್ರತಾ ಸಿಬ್ಬಂದಿ, ಸರ್ಚ್ ವಾರಂಟ್ ತೋರಿಸುವಂತೆ ಕೋರಿದ್ದಾರೆ.
ಈ ವೇಳೆ ಐಟಿ ಅಧಿಕಾರಿಗಳು, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಬಿಜೆಪಿ ವಾಟ್ಸ್ ಆಪ್ ಮೂಲಕ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಪ್ರತಿಯನ್ನು ಮತ್ತು ಐಟಿ ಇಲಾಖೆ ಆದೇಶವನ್ನು ತೋರಿಸಿದ್ದಾರೆ.
ಭದ್ರತಾ ಸಿಬ್ಬಂದಿ, ಇದು ಶಿವಕುಮಾರ್ ಅವರ ವಿರುದ್ಧ ನೀಡಿದ ದೂರು. ಸಿಎಂ ವಿರುದ್ಧ ಅಲ್ಲ ಎಂದು ಹೇಳಿ ಐಟಿ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದ್ದಾರೆ.
Discussion about this post