ಮೇಲೆ ಕೆಳಗೆ ನಮ್ಡೆ ಸರ್ಕಾರ ಅನ್ನುವ ಬಿಜೆಪಿ ಘೋಷಣೆ ಕರುನಾಡಿಗೆ ಶಾಪವಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ರಾಜ್ಯದಲ್ಲಿ ಕುಮಾರಸ್ವಾಮಿಯೋ, ಸಿದ್ದರಾಮಯ್ಯ ಅವರೋ ಸಿಎಂ ಆಗಿರುತ್ತಿದ್ರೆ ಕೇಂದ್ರದಿಂದ ಒಂದಿಷ್ಟು ಅನುಕೂಲವಾಗುತ್ತಿತ್ತು.
ಆದರೆ ಮೋದಿ ಎದುರು ನಿಂತು ಮಾತನಾಡುವ ಎದೆಗಾರಿಕೆ ಉಳ್ಳ ನಾಯಕರು ಕರ್ನಾಟಕದಲ್ಲಿ ಇಲ್ಲ. ಹೀಗಾಗಿಯೇ ಕರ್ನಾಟಕಕ್ಕೆ ಬರಬೇಕಾದ ಎಲ್ಲಾ ಯೋಜನೆಗಳು ಬೇರೆ ರಾಜ್ಯದ ಪಾಲಾಗುತ್ತಿದೆ. ಕೊರೋನಾ ಸಂಕಷ್ಟ ಕಾಲದಲ್ಲೂ ಆಗಿದ್ದು ಇದೇ. ಆಕ್ಸಿಜನ್ ಸಲುವಾಗಿ ಕೋರ್ಟ್ ಬರಬೇಕಾಯ್ತು ಅನ್ನುವುದೇ ಇದಕ್ಕೆ ಸಾಕ್ಷಿ.
ಇದೀಗ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಸರ್ಕಸ್ ಶುರುವಾಗಿದೆ. ಬಿಜೆಪಿಯವರ ಈ ಸರ್ಕಸ್ ನಿಂದ ಕೊರೋನಾ ಸೋಂಕಿತರು ಮತ್ತೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಯಡಿಯೂರಪ್ಪ ಮನೆ ಬಾಗಿಲಿಗೆ ಹೋಗಿ ಸಂಕಷ್ಟ ಹೇಳೋಣ ಅಂದ್ರೆ ಅವರು ರಸ್ತೆಗೆ ಗೇಟ್ ಎಳೆದಿದ್ದಾರೆ. ಇನ್ನು ಯಡಿಯೂರಪ್ಪ ಅವರ ಬಾಸ್ ಗತಿ ಅನ್ನದೆ ವಿಧಿಯಿಲ್ಲ.
Discussion about this post