ಬೆಳಗಾವಿ : ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದಿದ್ರೆ ಏನಾಗುತ್ತದೆ ಅನ್ನುವುದಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮಾಡಿದ ಯಡವಟ್ಟು ಸಾಕ್ಷಿ.
ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಅಗ್ನಿಹೋತ್ರ ಹೋಮವನ್ನು ಮಾಡುವುದರಿಂದ ಕೊರೋನಾ ಬಾರದಂತೆ ತಡೆಯಬಹುದು ಅನ್ನುವ ನಂಬಿಕೆ ಇದೆ. ಹಾಗಂತ ಅಗ್ನಿಹೋತ್ರ ಮಾಡಿದ್ದೇವೆ ಎಂದು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ಬೇಕಾ ಬಿಟ್ಟಿ ಓಡಾಡಿದ್ರೆ ಸೋಂಕು ಖಂಡಿತಾ ಬಂದೇ ಬರುತ್ತದೆ. ಅಗ್ನಿಹೋತ್ರವನ್ನು ಮನೆಯಲ್ಲಿ ಮಾಡುವುದರಿಂದ ಕೇವಲ ಕೊರೋನಾ ಮಾತ್ರವಲ್ಲದೆ ಗಾಳಿಯ ಮೂಲಕ ಹರಡಬಹುದಾದ ರೋಗಗಳನ್ನು ತಡೆಯಬಹುದಾಗಿದೆ. ಇನ್ನು ಅದರಿಂದ ಬರೋ ಹೊಗೆ ಕೂಡಾ ಪರಿಸರವನ್ನು ಸ್ವಚ್ಛ ಮಾಡುತ್ತದೆ.
ಆದರೆ ಅದ್ಯಾವ ಪುಣ್ಯಾತ್ಮ ಈ ಅಭಯ್ ಪಾಟೀಲರಿಗೆ ಅಗ್ನಿಹೋತ್ರದ ಬಗ್ಗೆ ಹೇಳಿದರೋ ಗೊತ್ತಿಲ್ಲ. ಅಗ್ನಿಹೋತ್ರ ಅಂದ್ರೆ ಹೊಗೆ ಬರಿಸೋದು ಎಂದು ಶಾಸಕರು ಅರ್ಥ ಮಾಡಿಕೊಂಡಿರುವಂತಿದೆ. ಹೀಗಾಗಿ ತಮ್ಮ ಮತ ಕ್ಷೇತ್ರದ ತುಂಬೆಲ್ಲಾ ಹೊಗೆ ಹಾಕಲು ಹೊರಟಿದ್ದಾರೆ. ಬಡಾವಣೆಗಳ ಮನೆ ಮುಂದೆ ಅಗ್ನಿಕುಂಡ ಸ್ಥಾಪಿಸಿ ಬೆರಣಿ. ಕರ್ಪೂರ, ತುಪ್ಪ, ಬೇವಿನ ಹಸಿ ಎಲೆ, ಅಕ್ಕಿ, ಲವಂಗ ಹಾಕಿ ಹೊಗೆ ಬರಿಸಲಾಗುತ್ತಿದೆ. ಈ ರೀತಿ ಮನೆ ಮುಂದೆ ಕುಂಡ ಸ್ಥಾಪಿಸಿ ಹೊಗೆ ಹಾಕಿದ್ರೆ ಕೊರೋನಾ ಹೋಗೋ ಬದಲು ಮನೆ ಮಂದಿಗೆಲ್ಲಾ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳದಿದ್ರೆ ಸಾಕು. ಅದರಲ್ಲೂ ಅಸ್ತಮಾ ಇರೋ ಮಂದಿಗೆ ಶಾಸಕರ ಹೊಗೆ ಕಾರ್ಯಕ್ರಮ ಉಸಿರುಗಟ್ಟಿಸೋದು ಗ್ಯಾರಂಟಿ.
ಇನ್ನೂ ದುರಂತ ಅಂದ್ರೆ ಇದನ್ನು ಮಾಢ್ಯ ಎಂದು ತಿಳಿದುಕೊಳ್ಳುವವರಿಗೆ ಮಾಢ್ಯದಂತೆ ಕಾಣಿಸುತ್ತದೆ. ಹೋಮ ಮಾಡುವುದರಿಂದ ವಾತಾವರಣ ಶುದ್ಧವಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ. ಪಾಪ ಬಿಜೆಪಿ ಶಾಸಕರು ಕೊರೋನಾ ಅಂದ್ರೆ ಚೀನಾದಿಂದ ಬಂದಿರುವ ಸೊಳ್ಳೆ ಅಂದುಕೊಂಡಿರುವಂತಿದೆ. ಹೀಗೆ ಊರೆಲ್ಲಾ ಹೊಗೆ ಹಾಕುವ ಬದಲು, ಯಾರಾದರೂ ತಿಳಿದವರನ್ನು ಕರೆಸಿ ನಿಯಮ ಬದ್ಧವಾಗಿ ಅಗ್ನಿಹೋತ್ರ ನಡೆಸಿರುತ್ತಿದ್ರೆ ಊರಿಗಾದ್ರೂ ಒಳ್ಳೆಯದಾಗಿರುತ್ತಿತ್ತು.
Discussion about this post