ಬೆಂಗಳೂರು : ದೇಶದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣಕ್ಕೆ ಇದೀಗ ಸ್ಪೋಟಕ ತಿರುವುದು ಸಿಕ್ಕಿದೆ. ಜೊತೆಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರನ್ನು ಬಾಯಿ ಮುಚ್ಚಿಸಲು ಬಿಜೆಪಿಗೆ ಅಸ್ತ್ರವೊಂದು ಸಿಕ್ಕಂತಾಗಿದೆ.
ಹ್ಯಾಕರ್ ಶ್ರೀಕಿ ವಿರುದ್ದ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದು, ಜಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರನ್ನು ಉಲ್ಲೇಖಿಸಲಾಗಿದೆ. ಹಾಗಂತ ಇವರನ್ನು ಆರೋಪಿಗಳನ್ನಾಗಿ ಗುರುತಿಸಿಲ್ಲ. ಬದಲಾಗಿ ಶ್ರೀಕಿಯೊಂದಿಗೆ ಪರಿಚಯ ಎಂದಷ್ಟೇ, ಶ್ರೀಕೃಷ್ಣ ಕೊಟ್ಟ ಹೇಳಿಕೆ ಮತ್ತು ಹಳೆಯ ಘಟನೆಗಳನ್ನು ಆಧರಿಸಿ ಹೆಸರು ಉಲ್ಲೇಖಿಸಲಾಗಿದೆ.
ಎರಡು ಪ್ರತ್ಯೇಕ ಆರೋಪ ಪಟ್ಟಿಯ ಪ್ರಕಾರ ಹ್ಯಾಕರ್ ಶ್ರೀಕೃಷ್ಣನಿಗೆ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಮತ್ತು ಉಮರ್ ನಲಪಾಡ್ ಪರಿಚಯಸ್ಥರು. ಜೊತೆಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಜೊತೆಗೂ ಶ್ರೀಕಿ ಒಡನಾಟ ಹೊಂದಿದ್ದ ಅನ್ನಲಾಗಿದೆ.
2018ರಲ್ಲಿ ನಡೆದ ಫರ್ಜಿ ಪಬ್ ಗಲಾಟೆ ಸಂದರ್ಭದಲ್ಲಿ ಮೊಹಮ್ಮದ್ ನಲಪಾಡ್ ಜೊತೆಗೆ ಶ್ರೀಕಿಯನ್ನು ಎ3 ಎಂದು ಗುರುತಿಸಲಾಗಿತ್ತು. ಹಾಗೆಯೇ 2020ರಲ್ಲಿ ಡ್ರಗ್ಸ್ ಕೇಸ್ ನಲ್ಲಿ ದರ್ಶನ್ ಲಮಾಣಿ ಬಂಧಿತನಾಗಿದ್ದ ಡ್ರಗ್ಸ್ ಕೇಸ್ ನಲ್ಲೂ ಶ್ರೀಕಿಯನ್ನು ಬಂಧಿಸಲಾಗಿತ್ತು.
ಆದರೆ ಹ್ಯಾರಿಸ್ ಪುತ್ರರಾಗಲಿ, ದರ್ಶನ್ ಲಮಾಣಿಯಾಗಲಿ ಬಿಟ್ ಕಾಯಿನ್ ದಂಧೆಯಲ್ಲಿ ಇದ್ದಾರೆ ಎಂದು ಹೇಳಿಲ್ಲ. ಹಾಗಾದ್ರೆ ಸ್ನೇಹಿತರಾಗಿದ್ದ ಮಾತ್ರಕ್ಕೆ ಕಾಂಗ್ರೆಸ್ ನಾಯಕರ ಪುತ್ರರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ. ಹಾಗಾದ್ರೆ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನಿಗೆ ಬಿಜೆಪಿ ನಾಯಕರ, ಬಿಜೆಪಿ ನಾಯಕರ ಮಕ್ಕಳ ಪರಿಚಯವೇ ಇರಲಿಲ್ಲವೇ ಅನ್ನುವುದು ಈಗಿರುವ ಪ್ರಶ್ನೆ.
Discussion about this post