ಬೆಂಗಳೂರು : ಕೊರೋನಾ ಮೂರನೇ ಅಲೆಯ ಆತಂಕ ದೂರವಾಗಿರುವ ಹಿನ್ನಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಮುಂದಿನ ಹಂತವಾಗಿ ಅಂಗನವಾಡಿ ಶಾಲೆ ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ನವೆಂಬರ್ 8 ರಿಂದ ಅಂಗನವಾಡಿ ಪ್ರಾರಂಭಿಸಲು ಅನುಮತಿ ನೀಡಲಾಗಿದ್ದು, ಹೀಗಾಗಿ 18 ತಿಂಗಳ ಬಳಿಕ ಪುಟಾಣಿಗಳ ಕಲರವ ಕೇಳಿ ಬರಲಿದೆ.
ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ 12ರವರೆಗೆ ಮಾತ್ರ ಕಲಿಕಾ ಚಟುವಟಿಕೆಗಳು ನಡೆಯಲಿದೆ. ಕೇಂದ್ರ ಪ್ರಾರಂಭಿಸುವ ಮುನ್ನ ಸ್ಥಳೀಯ ಗ್ರಾಮ ಪಂಚಾಯತ್ ಗಮನಕ್ಕೆ ತರುವಂತೆ ಸರ್ಕಾರ ಆದೇಶಿಸಿದೆ.
- ಇನ್ನುಳಿದಂತೆ ಮಕ್ಕಳ ಹಾಜರಾತಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ
- ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಅಂಗನವಾಡಿಗೆ ಬರೋ ಪೋಷಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ
- ಮಕ್ಕಳನ್ನು 1 ಮೀಟರ್ ಅಂತರದಲ್ಲಿ ಕೂರಿಸಬೇಕು
- ಅಂಗನವಾಡಿಗೆ ಬರೋ ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು.
- ಅಂಗನವಾಡಿಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕಾಗಿದ್ದು, ಮಕ್ಕಳಿಗೆ ಸಿಗದಂತೆ ಎಚ್ಚರ ವಹಿಸಬೇಕು.
- ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ದಿನಕ್ಕೊಂದು ತಂಡವಾಗಿ ಕಾರ್ಯನಿರ್ವಹಿಸಬೇಕು
- ಕೈ ತೊಳೆಯಲು ಸಾಬೂನು ವ್ಯವಸ್ಥೆ
- ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿ ಪ್ರತಿ 30 ನಿಮಿಷಕ್ಕೆ ಕೈ ತೊಳೆಯಬೇಕು
- ಕೇಂದ್ರಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ
- ಜ್ವರ, ಕೆಮ್ಮು ನೆಗಡಿ ಇರುವ ಮಕ್ಕಳು ಅಂಗನವಾಡಿಗೆ ಬರುವ ಹಾಗಿಲ್ಲ
Discussion about this post