ಕನ್ನಡತಿಯ ನಾಯಕಿ ಭುವಿ ಶೀಘ್ರದಲ್ಲೇ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಜನ್ಮದಿನವನ್ನು ಸ್ಪೆಷಲ್ ಆಗಿ ಆಚರಿಸಬೇಕು ಅನ್ನೋದು ಹರ್ಷನ ಪ್ಲ್ಯಾನ್. ಹೀಗಾಗಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದಿಗೆ ಒಪ್ಪಂದ ಕೂಡಾ ಮಾಡಿಕೊಳ್ಳಲಾಗಿದೆ. ಈಗ ಭುವಿ ಜನ್ಮದಿನಕ್ಕೆ ವಿಶೇಷವಾಗಿ ಪ್ರಪೋಸ್ ಮಾಡೋಕೆ ಹರ್ಷ ಪ್ಲ್ಯಾನ್ ರೂಪಿಸಿದ್ದು, ಈ ಆಲೋಚನೆಗೆ ವರುಧಿನಿ ವಿಲನ್ ಆಗುವ ಸಾಧ್ಯತೆ ಇದೆ.
ವೀಕ್ಷಕರು ಬರ್ತ್ ಡೇ ಯಾವಾಗ ಪ್ರಸಾರವಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಈ ವಾರ ಹುಟ್ಟುಹಬ್ಬದ ಆಚರಣೆ ಇರೋ ಹಾಗಿಲ್ಲ.
Discussion about this post