ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಸಿಗಲಿಲ್ಲ ಅನ್ನುವ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಟಿ ಭಾವನಾ ರಾಮಯ್ಯ ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಅಚ್ಚರಿ ಅಂದ್ರೆ ಅವರು ರಾಜ್ಯ ನಾಯಕರ ಮೂಲಕ ಪಕ್ಷಕ್ಕೆ ಬಂದಿಲ್ಲ. ಬದಲಾಗಿ ದೆಹಲಿ ನಾಯಕರ ಸಂಪರ್ಕದ ಮೂಲಕ ಪಕ್ಷಕ್ಕೆ ಮರಳಿರುವುದು ಕುತೂಹಲ ಕೆರಳಿಸಿದೆ.
ಇನ್ನು ಭಾವನಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವ ಕುರಿತಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಮಾಜಿ ಕಾರ್ಯಕರ್ತೆ ಭಾವನಾ ರಾಮಣ್ಣ ನನ್ನ ಭೇಟಿಯಾಗಿದ್ದಾದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವ ಸಂಕಲ್ಪ ಮಾಡಿದ್ದಾರೆ. ಹೀಗೆ ಪ್ರತಿಯೊಬ್ಬರ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಪಕ್ಷ ಪ್ರಾಬಲ್ಯ ಸಾಧಿಸಲಿದೆ ಅಂದಿದ್ದಾರೆ.
2018ರ ಮೇ 10 ರಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅವರು ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದರು.
ಅಂದ ಹಾಗೆ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಬಾಲಭವನದ ಅಧ್ಯಕ್ಷೆಯಾಗಿಯೂ ಭಾವನಾ ಕೆಲಸ ಮಾಡಿದ್ದರು. ಇನ್ನು ಈ ಬಾರಿ ದೆಹಲಿ ಮಟ್ಟದ ಮೂಲಕ ಪಕ್ಷಕ್ಕೆ ಮರಳಿರುವ ಭಾವನಾ ಅವರಿಗೆ ಪಕ್ಷದಲ್ಲಿ ದೊಡ್ಡ ಹುದ್ದೆ ಸಿಗಲಿದೆ ಅನ್ನಲಾಗಿದೆ. ಭಾಷೆಯ ಬಗ್ಗೆ ಭಾವನಾ ಅವರಿಗೆ ಹಿಡಿತವಿರುವುದರಿಂದ ರಾಷ್ಟ್ರ ಮಟ್ಟದಲ್ಲೂ ಭಾವನಾ ಕಾಂಗ್ರೆಸ್ ಪರ ದನಿ ಎತ್ತಲಿದ್ದಾರಂತೆ.
Discussion about this post