ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಕನಸು ಕಾಣುತ್ತಿರುವ ದಳಪತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕುಮಾರಸ್ವಾಮಿಯವರು ಕೊಟ್ಟಿರುವ RSS ವಿರೋಧಿ ಹೇಳಿಕೆಗಳು ಈಗಾಗಲೇ ಜೆಡಿಎಸ್ ಗೆ ಮುಳುವಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಪಕ್ಷದ ಹಳೆಯ ಹುಲಿಗಳು ಗುಡ್ ಬೈ ಹೇಳುತ್ತಿದ್ದು ಸಾಲು ಸಾಲು ನಾಯಕರು ಕಾಂಗ್ರೆಸ್ ಮತ್ತು ಬಿಜೆಪಿ ಕಡೆ ವಲಸೆ ಹೊರಟಿದ್ದಾರೆ.
ಇದರ ಮುಂದುವರಿದ ಭಾಗ ಅನ್ನುವಂತೆ ಉಪಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡ ಬೆನ್ನಲ್ಲೇ JDS ನಲ್ಲಿ ಮತ್ತೊಂದು ವಿಕೆಟ್ ಪತನವಾಗುವ ಸಾಧ್ಯತೆಗಳಿದೆ. ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಜೆಡಿಎಸ್ ಶಾಸಕ ಸಿ ಆರ್ ಮನೋಹರ್ ಬಿಜೆಪಿ ಸೇರಲಿದ್ದಾರೆ ಅನ್ನಲಾಗಿದೆ.
ಜನವರಿಯಲ್ಲಿ ಸ್ಥಳೀಯ ಸಂಸ್ಥೆಯಿಂದ ಮೇಲ್ಮನೆಗೆ ಆಯ್ಕೆಯಾಗುವ ಸಂಬಂಧ ಚುನಾವಣೆ ನಡೆಯಲಿದ್ದು, ಮನೋಹರ್ ಅವರನ್ನು ಚಿಕ್ಕಬಳ್ಳಾಪುರ ಕೋಲಾರ ಕ್ಷೇತ್ರದಿಂದ ಕಣಕ್ಕಳಿಸಲು ಬಿಜೆಪಿ ನಿರ್ಧರಿಸಿದೆ. ಈ ಭಾಗದಲ್ಲಿ ಗೆಲವು ಸಾಧಿಸುವ ಗೆಲ್ಲುವ ಕುದುರೆ ಬಿಜೆಪಿ ಬಳಗದಲ್ಲಿ ಇಲ್ಲ. ಹೀಗಾಗಿ ಮನೋಹರ್ ಅವರನ್ನು ಸೆಳೆಯಲು ಕಮಲ ನಾಯಕರು ಮುಂದಾಗಿದ್ದಾರೆ. ಇದಕ್ಕೆ ವಿರೋಧವೂ ಇಲ್ಲದೇ ಇರುವುದರಿಂದ ಮನೋಹರ್ ಜೊತೆಗೆ ಒಂದು ಸುದ್ದಿನ ಮಾತುಕತೆ ಮುಗಿಸಲಾಗಿದ್ದು, ಸಮ್ಮತಿಯನ್ನೂ ಸೂಚಿಸಿದ್ದಾರೆ.
ಮನೋಹರ್ ಅವರ ಅವಧಿ ಇನ್ನು ಎರಡು ತಿಂಗಳಲ್ಲಿ ಮುಗಿಯಲಿದ್ದು, ಬಿಜೆಪಿಗೆ ಸೇರಿಸಿ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುವುದು ಬಿಜೆಪಿ ನಾಯಕರ ಲೆಕ್ಕಚಾರ. ಈ ಮೂಲಕ ಚಿಕ್ಕಬಳ್ಳಾಪುರ ಕೋಲಾರ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲು ಕೇಸರಿ ಪಾಳಯ ನಿರ್ಧರಿಸಿದೆ.
ಒಟ್ಟಿನಲ್ಲಿ ಕುಮಾರಸ್ವಾಮಿಯವರು ಬದಲಾಗದಿದ್ರೆ ಪ್ರಾದೇಶಿಕ ಪಕ್ಷವೊಂದಕ್ಕೆ ಕಂಟಕ ತಪ್ಪಿದ್ದಲ್ಲ ಅನ್ನುವುದು ಸ್ಪಷ್ಟ.
Discussion about this post