ಇಸ್ರೋ ( ISRO) ಅನ್ನೋ ದೇಶದ ಹೆಮ್ಮೆಯ ಸಂಸ್ಥೆಯಲ್ಲೂ ರಾಜಕೀಯವೇ..?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ತಮ್ಮ ಆತ್ಮಚರಿತ್ರೆ, ನಿಲಾವು ಕುಡಿಚ್ಚ ಸಿಂಹಗಳ್ ( ಬೆಳದಿಂಗಳ ಕುಡಿದ ಸಿಂಹಗಳು) ಪುಸ್ತಕ ಬಿಡುಗಡೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ತಮ್ಮ ನಿವೃತ್ತಿಯ ನಂತ್ರ ಪುಸ್ತಕವನ್ನು ಬಿಡುಗಡೆ ಮಾಡೋದಾಗಿ ಹೇಳಿರುವ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಆತ್ಮ ಚರಿತ್ರೆಗೆ ಸೇರಿಸುವುದಾಗಿ ಹೇಳಿದ್ದಾರೆ.
ಈಗಾಗಲೇ ಬಿಡುಗಡೆ ಸಿದ್ದವಾಗಿರುವ ಪುಸ್ತಕದ ಕೆಲವೊಂದು ಮಾಹಿತಿಗಳು ಮಲಯಾಳಂ ಮಾಧ್ಯಮಗಳ ಕೈ ಸೇರಿತ್ತು. ಅದರಲ್ಲಿ ಪ್ರಮುಖವಾಗಿ ಚಂದ್ರಯಾನ 2 ರ ವೈಫಲ್ಯ ಮತ್ತು ಬಿಂದಿನ ಅಧ್ಯಕ್ಷ ಕೆ.ಶಿವನ್ ಅವರ ಲೋಪಗಳನ್ನು ಎತ್ತಿ ಹಿಡಿಯಲಾಗಿತ್ತು. ಅದರ ಬೆನ್ನಲ್ಲೇ ಇಸ್ರೋ ಅಧ್ಯಕ್ಷರ ಆತ್ಮ ಚರಿತ್ರೆ ವಿವಾದಕ್ಕೆ ಕಾರಣವಾಗಿತ್ತು.
Read More : ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ ಎಂಟ್ರಿ
‘ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು’ ಅನ್ನೋ ಈ ಆತ್ಮಚರಿತ್ರೆ ಯಾವಾಗ ವಿವಾದಕ್ಕೆ ಕಾರಣವಾಯ್ತೋ, ಸೋಮನಾಥನ್ ತಾವು ಆತ್ಮಚರಿತ್ರೆ ಪ್ರಕಟಣೆಯಿಂದ ಹಿಂದೆ ಸರಿಯೋದಾಗಿ ಘೋಷಿಸಿದ್ದಾರೆ.
ಇನ್ನು ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಸೋಮವನಾಥನ್ , ಪುಸ್ತಕದಲ್ಲಿರುವ ಮಾಹಿತಿಗಳು ತಪ್ಪಾಗಿ ಪ್ರಕಟಗೊಂಡಿದೆ. ನಾನು ಬರೆದ ಮಾತುಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಡಾ. ಶಿವನ್ ನನ್ನನ್ನು ಅಧ್ಯಕ್ಷರಾಗದಂತೆ ತಡೆಯಲು ಪ್ರಯತ್ನಿಸಿದರು ಎಂದು ನಾನು ಎಲ್ಲೂ ಹೇಳಿಲ್ಲ. ನಾನು ಹೇಳಿದ್ದು ಇಷ್ಟೇ, ಬಾಹ್ಯಾಕಾಶ ಆಯೋಗದ ಸದಸ್ಯರನ್ನಾಗಿ ಮಾಡುವುದನ್ನು ಸಾಮಾನ್ಯವಾಗಿ (ಇಸ್ರೋ ಅಧ್ಯಕ್ಷ ಸ್ಥಾನ) ಮೆಟ್ಟಿಲು ಎಂದು ನೋಡಲಾಗುತ್ತದೆ. ಆದಾಗ್ಯೂ, ಬೇರೆ (ಇಸ್ರೋ ಕೇಂದ್ರ) ನಿರ್ದೇಶಕರನ್ನು ನೇಮಿಸಲಾಯಿತು, ಆದ್ದರಿಂದ ಸ್ವಾಭಾವಿಕವಾಗಿ ನಾನು ಇಸ್ರೋ ಅಧ್ಯಕ್ಷನಾಗಲು ಇದ್ದ ಅವಕಾಶಗಳನ್ನು ಕಡಿಮೆಗೊಳಿಸಿತು” ಎಂದು ಸೋಮನಾಥ್ ಹೇಳಿದರು.
ಕೇರಳ ಮಾಧ್ಯಮಗಳ ಮಾಹಿತಿ ಪ್ರಕಾರ ಚಂದ್ರಯಾನ-2ರ ವೈಫಲ್ಯಕ್ಕೆ ಆಗಿನ ಅಧ್ಯಕ್ಷರೇ ಕಾರಣ ಅನ್ನೋದನ್ನು ಪುಸ್ತಕದಲ್ಲಿ ಹೇಳಲಾಗಿದೆಯಂತೆ. ಚಂದ್ರಯಾನ 2ರಲ್ಲಿ ಸಾಫ್ಟ್ವೇರ್ ದೋಷ ಕಾಣಿಸಿಕೊಂಡರೂ ಅದನ್ನು “ಲ್ಯಾಂಡರ್ನೊಂದಿಗೆ ಸಂವಹನ ನಡೆಸಲು ಸಾಧ್ಯವಾಗಿಲ್ಲ ಎಂದು ಬಿಂಬಿಸಲಾಯ್ತು ಎಂದು ಪುಸ್ತಕದಲ್ಲಿ ಬರೆಯಲಾಗಿದೆಯಂತೆ. ಜೊತೆಗೆ ಚಂದ್ರಯಾನ -2 ಮಿಷನ್ ವೈಫಲ್ಯಕ್ಕೆ ಕಾರಣವೇನು ಅನ್ನೋದನ್ನ ಸೋಮನಾಥನ್ ಸ್ಪಷ್ಟವಾಗಿ ಬರೆದಿದ್ದಾರೆ ಅನ್ನಲಾಗಿದೆ.
Image Credit To Original Source
ಈ ನಡುವೆ ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆ ಪ್ರಕಟಿಸದಂತೆ ಕೇಂದ್ರ ಸರ್ಕಾರ ಸೂಚಿಸಿದೆ ಅನ್ನುವ ಮಾತುಗಳು ಹರಿದಾಡಿತ್ತುಯ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸೋಮನಾಥನ್ ಕೇಂದ್ರ ಸರ್ಕಾರ ಪುಸ್ತಕವನ್ನು ಹಿಂಪಡೆಯುವಂತೆ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ( Somnath additionally confirmed that the book was not asked to be withdrawn by the Union government.)
ಹಾಗೇ ನೋಡಿದ್ರೆ, ಕೆ ಶಿವನ್ ಬಳಿಕ ಇಸ್ರೋ ಚೇರ್ಮೆನ್ ಜವಾಬ್ದಾರಿ ವಹಿಸಿಕೊಂಡ ಸೋಮನಾಥ್, ಚಂದ್ರಯಾನ 3 ಉಡಾವಣೆಗೆ ತಯಾರಿ ನಡೆಸಿದ್ದರು. ಈ ವೇಳೆ ಮಾಜಿ ಅಧ್ಯಕ್ಷ ಕೆ ಶಿವನ್ ಬಳಿ ಸತತವಾಗಿ ಸಂಪರ್ಕದಲ್ಲಿದ್ದರು, ಹಾಲಿ ಅಧ್ಯಕ್ಷರು, ಶಿವನ್ ಅವರಿಂದ ಹಲವು ಮಾಹಿತಿಯನ್ನು, ಮಾರ್ಗದರ್ಶನವನ್ನೂ ಪಡೆದಿರುವುದಾಗಿ ಸ್ವತಃ ಸೋಮನಾಥ್ ಅವರು ಕೂಡ ಹೇಳಿಕೊಂಡಿದ್ದರು. ಹಾಗಿದ್ದ ಮೇಲೆ ದೇಶದ ಗೌರವ ಎತ್ತಿ ಹಿಡಿದ ಸಂಸ್ಥೆಯಲ್ಲಿ ನಡೆಯುತ್ತಿರುವ ರಾಜಕೀಯವೇನು…?
S. Somanath, chairman of the Indian Space Research Organisation (ISRO), on Saturday, November 4, announced that he was withdrawing the publication of his Malayalam memoir, Nilavu Kudicha Simhangal (loosely translated as ‘The lions that drank the moonlight’).
Discussion about this post