ಇನ್ನು ಶನಿವಾರ ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ಭಾನುವಾರ ಇಂಡೋನೇಷ್ಯಾದ ಉತ್ತರ ಸುಲವೆಸಿ ಭಾಗದಲ್ಲಿ ಭೂಕಂಪ ಸಂಭವಿಸಿದೆ. ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟ ಪರಿಣಾಮ ಹಳ್ಳಿಗಳತ್ತ ಹರಿಯುತ್ತಿರುವ ಲಾವಾರಸದಿಂದ ಆತಂಕ ಸೃಷ್ಟಿಯಾಗಿದೆ
ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡ ಪರಿಣಾಮ ಜಾವಾ ಪ್ರಾಂತ್ಯಕ್ಕೆ ಸಮೀಪವಿರುವ ಲಮಾಂಗ್ ಮತ್ತು ಮಲಂಗ್ ನಡುವಿನ ಸೇತುವೆ ಕುಸಿತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಇನ್ನು ಜ್ವಾಲಾಮುಖಿ ಸ್ಪೋಟಗೊಂಡ ಪರಿಣಾಮ 13 ಮಂದಿ ಮೃತಪಟ್ಟಿದ್ದು, ಈ ಪೈಕಿ ಇಬ್ಬರ ಗುರುತು ಪತ್ತೆ ಹಚ್ಚಲಾಗಿದೆ.ಘಟನೆಯ ಬೆನ್ನಲ್ಲೇ 902 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಸುಮೇರು 3,600 ಮೀ ಎತ್ತರದ ಪರ್ವತವಾಗಿದ್ದು ಇಂಡೋನೇಷ್ಯಾದ 130 ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಕಳೆದ ಜನವರಿಯಲ್ಲಿ ಈ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಇದಾದ ಬಳಿಕ ಇದೀಗ ಡಿಸೆಂಬರ್ ನಲ್ಲಿ ಸ್ಫೋಟಗೊಂಡಿದೆ. ಸೆಮೇರು ಪರ್ವತ ಜಾವಾ ದ್ವೀಪದ ಅತೀ ಎತ್ತರದ ಪರ್ವತ ಎಂದೇ ಗುರುತಿಸಿಕೊಂಡಿದೆ. ಹೀಗಾಗಿ ದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡ ಬಳಿಕ ಲಾವಾರಸ ಹತ್ತಿರದ ಹಳ್ಳಿಗಳತ್ತ ಹರಿಯುತ್ತಿದ್ದು ಆತಂಕ ಆವರಿಸಿದೆ.
Kondisi erupsi Semeru saat ini. Silahkan mention jika ada yg dilokasi pic.twitter.com/5nnvqyoVJg
— PRB Indonesia BNPB (Disaster Risk Reduction) (@PRB_BNPB) December 4, 2021
ಜ್ವಾಲಾಮುಖಿ ಸ್ಫೋಟದ ಬೆನ್ನಲ್ಲೇ ರಕ್ಷಣಾ ಕಾರ್ಯದಳ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದೆ. 900 ಜನರ ಸ್ಥಳಾಂತರ ಜೊತೆಗೆ ಗಾಯಗೊಂಡ 41 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಇನ್ನು ಶನಿವಾರ ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ಭಾನುವಾರ ಇಂಡೋನೇಷ್ಯಾದ ಉತ್ತರ ಸುಲವೆಸಿ ಭಾಗದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
16.50
— jogjaupdate.com (@JogjaUpdate) December 4, 2021
BPBD Provinsi Jatim dan BPBD Lumajang telah menuju lokasi untuk melakukan assesment dan evakuasi warga di sekitar Gunung Semeru. Silahkan mention jika ada yang dilokasi@PRB_BNPB pic.twitter.com/DYj8qIW23u
Discussion about this post