ಬೆಂಗಳೂರು : ಈಗಿನ ಸ್ಥಿತಿಯಲ್ಲಿ ಬೆಂಗಳೂರು ಐಟಿ ಸಿಟಿ, ಗಾರ್ಡನ್ ಸಿಟಿ ಮಾತ್ರವಲ್ಲದೆ ಹಲವು ರೋಗಗಳ ಸಿಟಿಯಾಗುತ್ತಿದೆ. ಮೊನ್ನೆ ಮೊನ್ನೆ ಬಿಬಿಎಂಪಿ ನಡೆಸಿದ ಸಮೀಕ್ಷೆಯನ್ನು ನೋಡಿದರೆ ಕೆಲವೇ ವರ್ಷಗಳಲ್ಲಿ ಬೆಂಗಳೂರು ಮಧುಮೇಹಿಗಳ ರಾಜಧಾನಿಯಾಗಲಿದೆ ಅನ್ನಲಾಗಿತ್ತು.
ಇದೀಗ ಭಾರತ ಪ್ರಪಂಚದಲ್ಲಿ ಅತಿ ಹೆಚ್ಚು ಹೃದ್ರೋಗಿಗಳನ್ನ ಹೊಂದಿದ ದೇಶವಾಗಲಿದೆ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಈಗಾಗಲೇ ದೇಶದಲ್ಲಿ 7 ಕೋಟಿ ಜನ ಡಯಾಬಿಟಿಸ್ ನಿಂದ ಬಳಲುತ್ತಿದ್ದಾರೆ, 7 ಕೋಟಿ ಜನ ಪ್ರೀ ಡಯಾಬಿಟಿಸ್ ಹಂತದಲ್ಲಿದ್ದಾರೆ. ಇನ್ನು ಡಯಾಬಿಟಿಸ್ ಹೊಂದಿರುವವರಿಗೆ ಹೃದಯಾಘಾತದ ಸಮಸ್ಯೆಗಳು ಅತೀ ಹೆಚ್ಚಾಗಿರುತ್ತದೆ. ಪ್ರೀ ಡಯಾಬಿಟಿಕ್ ಆಗಿದ್ದವರಿಗೆ ಹೃದಯದ ರಕ್ತನಾಳಗಳ ಬ್ಲಾಕ್ ಅರಿವಿಗೆ ಬರುವುದಿಲ್ಲ. ಹೀಗಾಗಿ ಹಾರ್ಟ್ ಅಟ್ಯಾಕ್ಗಳು ಸಂಭವಿಸುತ್ತವೆ ಎಂದು ಮಂಜುನಾಥ್ ಹೇಳಿದ್ದಾರೆ.
ಜೊತೆಗೆ ಹೆಚ್ಚುತ್ತಿರುವ ಡ್ರಗ್ಸ್ ಸೇವನೆ ಕೂಡಾ ಹಾರ್ಟ್ ಅಟ್ಯಾಕ್ ಗೆ ಕಾರಣವಾಗಲಿದೆ. ಈ ಎಲ್ಲಾ ಕಾರಣಗಳಿಂದ 2030ರ ವೇಳೆಗೆ ದೇಶ ಅತಿ ಹೆಚ್ಚು ಹೃದ್ರೋಗಿಗಳನ್ನು ಹೊಂದಲಿದೆ ಅಂದಿದ್ದಾರೆ. ಹಾಗಾದ್ರೆ ಈ ಅಪಾಯ ಪಾರಾಗುವುದು ಹೇಗೆ, ತುಂಬಾ ಸಿಂಪಲ್ ನಮ್ಮ ಲೈಫ್ ಸ್ಟೈಲ್ ನಲ್ಲಿ ಬದಲಾವಣೆ ಮಾಡಿಕೊಂಡರೆ ಸಾಕು, ಜಂಕ್ ಫುಡ್, ದುಶ್ಚಟಗಳಿಂದ ದೂರವಿರೋದು ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಿದರೆ ಅದ್ಯಾವ ರೋಗವು ಹತ್ತಿರ ಸುಳಿಯುವುದಿಲ್ಲ. ಜೊತೆಗೆ ಒಂದಿಷ್ಟು ದೈಹಿಕ ಚಟುವಟಿಕೆಗಳು ಅಗತ್ಯವಾಗಿರುತ್ತದೆ.
Discussion about this post