ಲಸಿಕೆ ವಿಚಾರದಲ್ಲಿ ಕೆಲಸ ಅಧಿಕಾರ ಎಡಬಿಡಂಗಿತನ ಇನ್ನೂ ಮುಂದುವರಿದಿದೆ. ಸಾಕಷ್ಟು ಲಸಿಕೆಗಳನ್ನು ಪೂರೈಸಲು ವಿಫಲವಾಗಿರುವ ಅಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳುವ ಸಲುವಾಗಿ ಬೆದರಿಕೆ ಒಡ್ಡಲಾರಂಭಿಸಿದ್ದಾರೆ. ಮೊನ್ನೆ ಮೊನ್ನೆ ಚಾಮರಾಜನಗರದ ನೋ ವ್ಯಾಕ್ಸಿನ್ ನೋ ರೇಷನ್ ಎಂದು ಆದೇಶ ಹೊರಡಿಸಲಾಗಿತ್ತು. ಜನಪ್ರತಿನಿಧಿಗಳು, ಜನ ಸಾಮಾನ್ಯರು ಛೀ… ಥೂ ಎಂದು ಉಗಿದ ಮೇಲೆ ಜಿಲ್ಲಾಡಳಿತ ತನ್ನ ಆದೇಶ ಹಿಂದಕ್ಕೆ ಪಡೆದಿದೆ.
ಇನ್ನು ಲಸಿಕೆ ಪಡೆಯುವ ನಿಟ್ಟಿನಲ್ಲಿ ಜನರ ಮನವೊಲಿಸಬೇಕು, ಲಸಿಕೆ ಪಡೆಯುವ ನಿಟ್ಟಿನಲ್ಲಿ ಜನರಿಗಿರುವ ತಪ್ಪು ನಂಬಿಕೆಗಳನ್ನು ನಿವಾರಿಸಬೇಕು. ಅದ್ಯಾವ ಕೆಲಸವನ್ನು ಮಾಡದ ಜಿಲ್ಲಾಡಳಿತ ಬೆದರಿಕೆ ಸ್ವರೂಪದ ಆದೇಶಗಳನ್ನು ತರುತ್ತಿದೆ.
ಇದರ ಮುಂದುವರಿದ ಭಾಗವಾಗಿ ಕೊಪ್ಪಳ ಜಿಲ್ಲಾಧಿಕಾರಿ ಲಸಿಕೆ ಪಡೆದವರಿಗೆ ಮಾತ್ರ ಜಿಲ್ಲಾಡಳಿತ ಭವನಕ್ಕೆ ಪ್ರವೇಶ ಎಂಬ ವಿಚಿತ್ರ ಆದೇಶವನ್ನು ಹೊರಡಿಸಿದ್ದಾರೆ. ಒಳ್ಳೆಯ ಕೆಲಸ ಅಂದ್ರೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೀಗೆ ಆದೇಶ ಹೊರಡಿಸಿದರೂ ,ಜಿಲ್ಲಾಡಳಿತ ಭವನದ ಮುಖ್ಯ ಪ್ರವೇಶ ದ್ವಾರದಲ್ಲೇ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಹಾಕದ ಯಾರೇ ಬಂದರೂ ಅವರಿಗೆ ಲಸಿಕೆ ನೀಡಲಾಗುತ್ತಿದೆ. ಈ ಮೂಲಕ ಒಳ್ಳೆಯ ಕೆಲ ಮಾಡಲಾಗುತ್ತಿದೆ.
ಇನ್ನು ಈ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತಿದ್ದು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಜಿಲ್ಲಾಡಳಿತ ಭವನಕ್ಕೆ ಬರೋ ಪ್ರತಿಯೊಬ್ಬರ ಲಸಿಕಾ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಲಸಿಕೆ ಪಡೆದಿರದೆ ಬಂದ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಯೇ ಜಿಲ್ಲಾಡಳಿತದೊಳಗೆ ಬಿಡಲಾಗುತ್ತಿದೆ.
Discussion about this post