ನಾನು ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳಿಲ್ಲ.ನಾನು ಒಂದೇ ಒಂದು ಸುಳ್ಳು ಹೇಳಿದ್ರೆ ರಾಜಕೀಯದಲ್ಲಿ ಇರುವುದೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಮೋದಿ ಸಂಸತ್ ನಲ್ಲಿ ಮಾತಾಡೋಲ್ಲ , ಸುದ್ದಿಗೋಷ್ಠಿ ಮಾಡೋದಿಲ್ಲ. ಈ ಮೀಡಿಯಾದವರು ಅವರನ್ನು ಕೇಳೋದು ಇಲ್ಲ. ನಾವು ಸಿಕ್ಕಾಗ ನಮ್ಮನ್ನು ಹಿಡ್ಕೊಂಡ್ ಕೇಳ್ತಾರೆ , ಯಾವಾಗ್ಲೂ ತೊಂದ್ರೆ ಕೊಡ್ತಾನೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ವಿರುದ್ಧವೂ ಹರಿಹಾಯ್ದಿದ್ದಾರೆ.
ಇದೇ ವೇಳೆ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕಿಡಿ ಕಾರಿದ ಸಿದ್ದರಾಮಯ್ಯ, ಸಂವಿಧಾನ ಬದಲು ಮಾಡ್ತೀನಿ ಅಂತಾರೆ ಬಿಜೆಪಿಯವರು. ಅದು ಕಾಮನ್ ಮ್ಯಾನ್ ಅಲ್ಲ, ಎಂಪಿ ಅಷ್ಟೇ ಅಲ್ಲ ಸಚಿವ ಅನಂತಕುಮಾರ್ ಹೆಗಡೆ. ಅವನು ಯಾವನೋ ಎಂಥದೋ ಸೂರ್ಯ ಅಂತ ಅವನು ಅಂಬೇಡ್ಕರ್ ಪುತ್ಥಳಿಗಳನ್ನು ಧ್ವಂಸ ಮಾಡಬೇಕು ಅಂತಾನೆ.
ದೆಹಲಿಯಲ್ಲಿ ಜಂತರ್ ಮಂತರ್ ಅಂತ ಏರಿಯಾ ಇದೆ ಅಲ್ಲಿ ಆರ್ಎಸ್ಎಸ್ನವರು ಸಂವಿಧಾನ ಸುಟ್ಟು ಹಾಕಿದ್ರು. ಇಂತವರು ಹಿಟ್ಲರ್ ಮನಸ್ಸಿನವರು ಎಂದು ಕಿಡಿಕಾರಿದರು.