ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದ ತನಿಖೆಯೇ ನಿಗೂಢವಾಗಿ ಸಾಗಿದ್ದು, ಬಿಟ್ ಕಾಯಿನ್ ಪ್ರಕರಣದ ಶ್ರೀಕಿ ಇದೀಗ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿದ್ದಾನೆ. ಬಿಜೆಪಿ ವಿರುದ್ಧ ಹೋರಾಡಲು ಅಸ್ತ್ರಗಳಿಲ್ಲದ ರಾಜ್ಯ ಕಾಂಗ್ರೆಸ್ ನಾಯಕರು ಮೋದಿಯನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದರು. ಇದೀಗ ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ಹೋರಾಟಕ್ಕೆ ಬಲ ತುಂಬಿದೆ.
ಇನ್ನು ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಅನ್ನು ಎದುರಿಸುವಲ್ಲಿ ಬಿಜೆಪಿ ಕೂಡಾ ಸಂಪೂರ್ಣ ವಿಫಲವಾಗಿದ್ದು, ಈ ವಿಚಾರದಲ್ಲಿ ಮಾತನಾಡಬೇಕಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಸೈಲೆಂಟ್ ಆಗಿದ್ರು. ಬದಲಾಗಿ ಆರೋಗ್ಯ ಸಚಿವ ಸುಧಾಕರ್, ಕಂದಾಯ ಸಚಿವ ಆರ್ ಅಶೋಕ್, ಆಹಾರ ಸಚಿವ ಕೆ ಗೋಪಾಲಯ್ಯ ಮಾತನಾಡುತ್ತಿದ್ರು.
ಇದೀಗ ಈ ವಿಷಯದ ಕುರಿತಂತೆ ಖಾಸಗಿ ವಾಹಿನಿಯೊಂದಕ್ಕೆ ವಿಶೇಷ ಸಂದರ್ಶನ ಕೊಟ್ಟಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅನ್ನುವ ಪರೋಕ್ಷ ಸುಳಿವು ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶ್ರೀಕಿಯನ್ನು ಬಳಸಿಕೊಂಡು ಅಕ್ರಮ ಎಸಗಲಾಗಿದೆ. ಆನ್ ಲೈನ್ ನಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಅಕ್ರಮಗಳು ನಡೆದಿದೆ ಅನ್ನುವ ಮೂಲಕ ನಲಪಾಡ್ ಗೆಲುವಿನ ರಹಸ್ಯ ತೆರೆದಿಟ್ಟಿದ್ದಾರೆ. ಹಾಗಂತ ಇದನ್ನೂ ನೇರವಾಗಿ ಹೇಳಿಲ್ಲ ಬದಲಾಗಿ, ಕೆಲ ಕಾಂಗ್ರೆಸ್ ಪಕ್ಷ ಮಿತ್ರರು ನನಗೆ ಕರೆ ಮಾಡಿ, ಯುವ ಕಾಂಗ್ರೆಸ್ ಚುನಾವಣೆಯ ಆನ್ ಲೈನ್ ವೋಟಿಂಗ್ ಹ್ಯಾಕ್ ಮಾಡಿಸಿದ್ದಾರೆ ಅನ್ನುವ ಸಂದೇಹವಿದೆ. ಅಧನ್ನು ತನಿಖೆ ಮಾಡಿ ಅಂತಾ ಮನವಿ ಮಾಡುತ್ತಿದ್ದಾರೆ ಎಂದು ತಮ್ಮ ಅನುಮಾನದ ಮೂಲವನ್ನು ಗೃಹ ಸಚಿವರ ಬಿಚ್ಚಿಟ್ಟಿದ್ದಾರೆ.
Discussion about this post