10 ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಮಾತ್ರ ಶಾಲೆಗೆ ಆಗಮಿಸಲು ಅವಕಾಶ ನೀಡಲಾಗಿದೆ.
ನವದೆಹಲಿ : ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಲಾರಂಭಿಸಿದೆ. ಹಲವು ರಾಜ್ಯಗಳ ರಾಜಧಾನಿಗಳಲ್ಲೇ ಕೊರೋನಾ ಸೋಂಕು ಅಟ್ಟಹಾಸಗೈಯುತ್ತಿದೆ. ಹೀಗಾಗಿ ಕಠಿಣ ಕ್ರಮಗಳಿಗೆ ಮುಂದಾಗಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಮಕ್ಕಳನ್ನು ಕೊರೋನಾ ಸೋಂಕಿನಿಂದ ರಕ್ಷಿಸುವ ನಿಟ್ಟಿನಲ್ಲಿ ಗೋವಾ ರಾಜ್ಯ ಸರ್ಕಾರ ಜನವರಿ 26ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಜನವರಿಗೆ 31ರವರೆಗೆ ಮುಂಬೈ ನಲ್ಲಿ ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ ಗಳಿಗೆ ರಜೆ ನೀಡಿದೆ. ಗೋವಾದಲ್ಲಿ 10 ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಮಾತ್ರ ಶಾಲೆಗೆ ಆಗಮಿಸಲು ಅವಕಾಶ ನೀಡಲಾಗಿದೆ.
ಮತ್ತೊಂದು ತೆಲಂಗಾಣದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜನವರಿ 8 ರಿಂದ 16ರವರೆಗೆ ರಜೆ ಘೋಷಿಸಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಆದೇಶಿಸಿದ್ದಾರೆ.
ದೇಶದಲ್ಲಿ ಮೂರನೇ ಅಲೆ ಅಧಿಕೃತ : ಲಸಿಕೆ ಕಾರ್ಯಪಡೆ ಮುಖ್ಯಸ್ಥರ ಹೇಳಿಕೆ
ನವದೆಹಲಿ : ವಿಶ್ವದಲ್ಲಿ ಈಗಾಗಲೇ ವ್ಯಾಪಕವಾಗಿ ಹರಡುತ್ತಿರುವ ಒಮಿಕ್ರೋನ್ ಭಾರತದಲ್ಲೂ ಅಬ್ಬರಿಸಲಾರಂಭಿಸಿದೆ. ತಜ್ಞರ ಎಚ್ಚರಿಕೆಯಂತೆ ಭಾರತದಲ್ಲೂ ಕೊರೋನಾ ರೂಪಾಂತರಿ ವೈರಸ್ ಮೂರನೇ ಅಲೆಗೆ ಕಾರಣವಾಗಿದೆ. ಈ ನಡುವೆ ದೇಶದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಲಸಿಕೆ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ.ಅರೋರಾ ಹೇಳಿಕೆ ಕೊಟ್ಟಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಅವರು, ಡಿಸೆಂಬರ್ ಮೊದಲ ವಾರ ಭಾರತದಲ್ಲಿ ಒಮಿಕ್ರೋನ್ ಪ್ರಕರಣ ಪತ್ತೆಯಾಗಿತ್ತು. ಇದಾದ ಬಳಿಕ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಿದ್ರೆ ಅದರ ಪಾಲು ಶೇ 12ಕ್ಕೆ ಏರಿತ್ತು. ಬಳಿಕದ ವಾರದಲ್ಲಿ ಈ ಪ್ರಮಾಣ ಶೇ21ನ್ನು ತಲುಪಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ ಏರಿದಂತೆ ಒಮಿಕ್ರೋನ್ ರೂಪಾಂತರಿ ವೈರಸ್ ಗೂ ತುತ್ತಾಗುತ್ತಿರುವವರ ಸಂಖ್ಯೆ ಏರುತ್ತಿದೆ ಎಂದು ಆರೋರಾ ಹೇಳಿದ್ದಾರೆ.
ಇನ್ನು ದೆಹಲಿ, ಮುಂಬೈ ಮತ್ತು ಕೋಲ್ಕತಾ ನಗರದಲ್ಲಿ ಒಮಿಕ್ರೋನ್ ಪ್ರಕರಣ ತೀವ್ರವಾಗಿ ಹರಡಿದೆ ಅಂದಿರುವ ಅವರು, ಶೇ 75ರಷ್ಟು ಪಾಲು ಇಲ್ಲಿಂದಲೇ ಬರುತ್ತಿದೆ ಅಂದಿದ್ದಾರೆ. ಈ ಮೂಲಕ ದೇಶದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಸ್ಪಷ್ಟಪಡಿಸಿರುವ ಆರೋರಾ ರಾಜ್ಯಗಳು ಕಠಿಣ ಕ್ರಮಗಳನ್ನು ಜಾರಿಗೆ ತಾರದ ಹೊರತು ಸೋಂಕು ನಿಯಂತ್ರಣ ಸಾಧ್ಯವಿಲ್ಲ ಅಂದಿದ್ದಾರೆ.
Discussion about this post