ಬೆಂಗಳೂರು : ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಿನ್ನೆ ಸಿಎಂಗಳ ಸಭೆಯಲ್ಲೂ ಪ್ರಧಾನಮಂತ್ರಿಗಳು ಹಲವು ಸೂಚನೆ ಕೊಟ್ಟಿದ್ದಾರೆ.
ಈ ನಡುವೆ ಕರ್ನಾಟಕದಲ್ಲೂ ಅಬ್ಬರಿಸುತ್ತಿರುವ ಸೋಂಕು ತಡೆಯುವ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಸೋಂಕು ತಡೆಗಟ್ಟುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಕೈ ಕಟ್ಟಿ ಹಾಕಿದೆ. ರಾಜ್ಯ ಸರ್ಕಾರ ಹೊರಡಿಸುವ ಆದೇಶಗಳನ್ನು ಮಾತ್ರ ಪಾಲಿಸಿ ಕೊರೋನಾ ತಡೆಗಟ್ಟಿ ಅಂದಿದೆ. ಹೀಗಾದ್ರೆ ಕೊರೋನಾ ಸೋಂಕು ನಿಯಂತ್ರಿಸಲು ದೇವರಾಣೆಗೂ ಸಾಧ್ಯವಿಲ್ಲ.
ಮೈಸೂರಿನಲ್ಲಿ ಅಬ್ಬರಿಸುವ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೆಲ ಆದೇಶಗಳನ್ನು ಹೊರಡಿಸಿದ್ದರು. ಚಿತ್ರಮಂದಿರಗಳೇ ಕೊರೋನಾ ಹಾಟ್ ಸ್ಪಾಟ್ ಆಗುತ್ತಿರುವ ಹಿನ್ನಲೆಯಲ್ಲಿ ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ಇದ್ದರೆ ಮಾತ್ರ ಚಿತ್ರಮಂದಿರಕ್ಕೆ ಎಂಟ್ರಿ ಸೇರಿ ಕಠಿಣ ಸೂಚನೆಗಳನ್ನು ನೀಡಿದ್ದರು.
ಇದನ್ನೂ ಓದಿ : ಕೊರೋನಾ ತಡೆಗೆ ಟಫ್ ರೂಲ್ಸ್ – ನೆಗೆಟಿವ್ ರಿಪೋರ್ಟ್ ಕಾರ್ಡ್ ಇದ್ರೆ ಮಾತ್ರ ಫಿಲ್ಮಂ ನೋಡಬಹುದು – ಮೈಸೂರು ಎಂಟ್ರಿ ಇನ್ನು ಬಲು ಕಷ್ಟ
ಇದರ ಬೆನ್ನಲ್ಲೇ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಡಳಿತಗಳು ಮತ್ತು ಸ್ಥಳೀಯ ಸಂಸ್ಥೆಗಳು ಪ್ರತ್ಯೇಕ್ಷ ಆದೇಶ ಹೊರಡಿಸುವಂತಿಲ್ಲ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ : ಕೊರೋನಾ ಸೋಲಿಸುವ ಸಲುವಾಗಿ ಊಟದ ವಿರಾಮಕ್ಕೂ ಕತ್ತರಿ…!
ಕೋವಿಡ್ ಕುರಿತು ಯಾವುದೇ ಸೂಚನೆ ಹಾಗೂ ನಿರ್ದೇಶನವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಶಾಖೆಯ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಸರ್ಕಾರ ಮುಖ್ಯ ಕಾರ್ಯದರ್ಶಿ ಮಾತ್ರ ಹೊರಡಿಸತಕ್ಕದ್ದು ಹಾಗೂ ಎಲ್ಲಾ ಆದೇಶಗಳು ಮುಖ್ಯಮಂತ್ರಿಗಳ ಅನುಮೋದನೆ ಪಡೆದಿರಬೇಕು ಎಂದು ಸೂಚಿಸಲಾಗಿದೆ.
Discussion about this post