ಅನ್ನ ಹಾಕಿದ ಮಾಲೀಕನ ಅಂಗಡಿಗೆ ಕನ್ನ ( Gold theft ) ಹಾಕಿದ ಖದೀಮನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ
ಬೆಂಗಳೂರು : ಕೆಲಸ ಮಾಡುವ ಚಿನ್ನದಂಗಡಿಯಿಂದ ಕಳೆದ ಒಂದು ವರ್ಷದಿಂದ ಚಿನ್ನ ಕಳುವು ( Gold theft ) ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಈತನ ಕೃತ್ಯಕ್ಕೆ ಸಾಥ್ ಕೊಟ್ಟಿದ್ದ ಮತ್ತೊಬ್ಬ ಸ್ನೇಹಿತನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಶವಂತಪುರದ ಚೇತನ್ ನಾಯ್ಡು ( 22) ದಿ ಬೆಸ್ಟ್ ಜ್ಯುವೆಲ್ಲರಿ ( the best jewellery shop yeshwanthpura ) ಅನ್ನುವ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ. 4 ವರ್ಷಗಳಿಂದ ಇಲ್ಲೇ ಕೆಲಸ ಮಾಡುತ್ತಿದ್ದ ಕಾರಣ ಮಾಲೀಕರ ವಿಶ್ವಾಸವನ್ನೂ ಗಳಿಸಿದ್ದ. ಈ ನಡುವೆ ಗ್ರಾಹಕರೊಬ್ಬರು ಚಿನ್ನದರ ಸರಕ್ಕೆ ಆರ್ಡರ್ ಕೊಟ್ಟು ಹೋಗಿದ್ದರು. ಚಿನ್ನದ ಸರವನ್ನು ತಯಾರಿಸಿ ಅಂಗಡಿಯ ಡಿಸ್ ಪ್ಲೇ ಬೋರ್ಡ್ ನಲ್ಲಿ ಹಾಕಲಾಗಿತ್ತು.
ಗ್ರಾಹಕರು ಅಂಗಡಿಗೆ ಬಂದು ಚಿನ್ನದ ಸರ ಕೇಳಿದಾಗ ತೆಗೆದುಕೊಡಲು ಡಿಸ್ ಪ್ಲೇ ಬೋರ್ಡ್ ನೋಡಿದ್ರೆ ಚಿನ್ನದ ರ ನಾಪತ್ತೆಯಾಗಿತ್ತು. ಈ ವೇಳೆ ಅಂಗಡಿ ಮಾಲೀಕರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸೇಲ್ಸ್ ಮ್ಯಾನ್ ಚೇತನ್ ಚಿನ್ನದ ಸರ ಎಗರಿಸಿರುವುದು ಗೊತ್ತಾಗಿದೆ.
ಇದನ್ನೂ ಓದಿ : actress indraja : ಇಂದ್ರಜಾ ಮದುವೆಗೆ ಎಷ್ಟು ಜನ ಬಂದಿದ್ದರು… ಖರ್ಚಾಗಿತ್ತು ಎಷ್ಟು ಗೊತ್ತಾ..? ವೆಚ್ಚದ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ
ಹೀಗಾಗಿ ಅಂಗಡಿ ಮಾಲೀಕರು ಯಶವಂತಪುರ ಪೊಲೀಸ್ ಠಾಣೆಗೆ ( yeshwanthpur police station ) ದೂರು ಕೊಟ್ಟಿದ್ದಾರೆ. ಇದೇ ವೇಳೆ ಅಂಗಡಿ ಮಾಲೀರು ಸಂಪೂರ್ಣ ಚಿನ್ನದ ಸ್ಟಾಕ್ ಪರಿಶೀಲನೆ ನಡೆಸಿದಾಗ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮತ್ತಷ್ಟು ಸಿಸಿಟಿವಿ ದೃಶ್ಯಗಳನ್ನು ನೋಡಿದ್ರೆ ಕಳೆದ ಒಂದು ವರ್ಷದಿಂದ ಚೇತನ್ ಚಿನ್ನ ಎಗರಿಸಿರುವುದು ಬೆಳಕಿಗೆ ಬಂದಿದೆ. ಎನ್ನಿಲ್ಲ ಅಂದರೂ 25 ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣಗಳನ್ನು ಈತ ಎಗರಿಸಿದ್ದ.
ಮೊದ ಮೊದಲು ಈ ಚೇತನ್ ಸಣ್ಣ ಪ್ರಮಾಣದ ಚಿನ್ನದ ಆಭರಣ ಎಗರಿಸುತ್ತಿದ್ದ. ಬಳಿಕ ಅದನ್ನು ಮಾರಾಟವಾಗಿದೆ ಎಂದು ಪುಸ್ತಕದಲ್ಲಿ ನಮೂದಿಸುತ್ತಿದ್ದ. ಬಳಿಕ ಕದ್ದ ಚಿನ್ನವನ್ನು ಸ್ನೇಹಿತ ವಿಜಯ್ ಗೆ ತಲುಪಿಸುತ್ತಿದ್ದ. ಈ ವಿಜಯ್ ಚಿನ್ನವನ್ನು ಕೆಲವೊಮ್ಮೆ ವಿಜಯ್ ಅಡವಿಡುತ್ತಿದ್ದ, ಕೆಲವೊಮ್ಮೆ ಮಾರಾಟ ಮಾಡುತ್ತಿದ್ದ. ಬಳಿಕ ಇಬ್ಬರೂ ಹಣವನ್ನು ಹಂಚಿಕೊಳ್ಳುತ್ತಿದ್ದರು. ಹೀಗೆ ಬಂದ ಹಣದಲ್ಲಿ ಕಾರು ಬೈಕ್ ಖರೀದಿಸಿದ್ದ ಚೇತನ್ ಐಷರಾಮಿ ಜೀವನ ನಡೆಸುತ್ತಿದ್ದ ಎಂದು ಗೊತ್ತಾಗಿದೆ.
ಅಪಘಾತವಾಗಿದೆ ಎಂದು ಕರೆ ಮಾಡಿದ ಪತಿಯನ್ನು ಪತ್ನಿಯೇ ಬಂದು ಸಾಯಿಸಿದ್ಲು
ಅಕ್ರಮ ಸಂಬಂಧ ಅನ್ನುವುದು ತಾತ್ಕಾಲಿಕ ಸುಖ ನೀಡಬಲ್ಲುದು. ಆದರೆ ದೀರ್ಘ ಅವಧಿಯಲ್ಲಿ ಅದೊಂದು ಕಾರ್ಕೋಟಕ ವಿಷವೇ ಸರಿ ( murder of husband by wife )
ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದೆ. ( murder of husband by wife ) ಗಮನಾರ್ಹ ಅಂಶ ಅಂದ್ರೆ ತಾಳಿ ಕಟ್ಟಿದ ಗಂಡನನ್ನು ಪತ್ನಿಯೇ ಕಾರು ಡಿಕ್ಕಿ ಹೊಡೆದು ಕೊಂದಿದ್ದಾಳೆ.
ಕೆಲ ದಿನಗಳ ಹಿಂದೆ ಕಮತಗಿ ಕ್ರಾಸ್ ಬಳಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣ ಪೊಲೀಸ್ ಠಾಣೆ ತಲುಪಿತು. ಸ್ಥಳ ಪರಿಸೀಲನೆ ಮಾಡಿದಾಗ ಅದೊಂದು ಹಿಟ್ ಅಂಡ್ ರನ್ ಪ್ರಕರಣದಂತೆ ಗೋಚರಿಸಿತ್ತು. ಆದರೆ ಮೃತ ವ್ಯಕ್ತಿಯ ಮೈ ಮೇಲಿನ ಗಾಯದ ಗುರುತುಗಳನ್ನು ಗಮನಿಸಿದಾಗ ಇದೊಂದು ಕೊಲೆ ಅನ್ನುವ ಸಂಶಯ ಮೂಡಿಸಿತ್ತು. ಹೀಗಾಗಿ ತನಿಖೆ ಕೈಗೆತ್ತಿಕೊಂಡ ಅಮೀನಗಡ ಪೊಲೀಸರು ಮೊದಲು ಮೃತ ವ್ಯಕ್ತಿ ಯಾರು ಅನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಮೃತ ವ್ಯಕ್ತಿ ಪ್ರವೀಣ ಸೇಬಣ್ಣ ( 30 ) ಅನ್ನುವುದು ಗೊತ್ತಾಗಿದೆ.
ಇದೇ ಸಂದರ್ಭದಲ್ಲಿ ಪ್ರವೀಣ ಸೇಬಣ್ಣ ಅವರ ಪತ್ನಿ ನಿತ್ಯಾ ನಡೆ ನುಡಿ ಪೊಲೀಸರಲ್ಲಿ ಅನುಮಾನ ಮೂಡಿಸಿದೆ. ಹೀಗಾಗಿ ಕರೆದು ವಿಚಾರಣೆ ನಡೆಸಿದಾಗ ನಿತ್ಯಾ ಸತ್ಯ ಬಿಚ್ಚಿಟ್ಟಿದ್ದಾಳೆ. ನಿತ್ಯಾಳಿಗೆ ರಾಘವೇಂದ್ರ ಅನ್ನುವ ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧವಿತ್ತು. ಇದಕ್ಕೆ ಗಂಡ ಪ್ರವೀಣ ಅಡ್ಡಿಯಾಗಿದೆ. ಈ ಕಾರಣದಿಂದ ನಿತ್ಯಾ ಮತ್ತು ರಾಘವೇಂದ್ರ ಸೇರಿ ಪ್ರವೀಣನ ಕೊಲೆ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಪ್ರವೀಣ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಿತ್ಯಾ ಮತ್ತು ರಾಘವೇಂದ್ರ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ನಿತ್ಯಾಳಿಗೆ ಕರೆ ಮಾಡಿದ ಪ್ರವೀಣ ಅಪಘಾತವಾಗಿರುವ ಬಗ್ಗೆ ಹೇಳಿದ್ದಾನೆ. ಗಂಡ ಸತ್ತಿಲ್ಲ ಅನ್ನುವುದನ್ನು ಅರಿತ ನಿತ್ಯಾ ಮತ್ತೆ ರಾಘವೇಂದ್ರನ ಜೊತೆಗೆ ಬಂದು ಮತ್ತೊಂದು ಸುತ್ತು ಕಾರಿನಲ್ಲಿ ಗುದ್ದಿಸಿದ್ದಾಳೆ. ಗಂಡ ಉಸಿರು ಚೆಲ್ಲಿರುವುದು ಖಚಿತವಾದ ಬಳಿಕವೇ ಅಲ್ಲಿಂದ ಪರಾರಿಯಾಗಿದ್ದಾರೆ ಅನ್ನುವುದು ತನಿಖೆಯಿಂದ ಗೊತ್ತಾಗಿದೆ.
Discussion about this post