Gauripurada Gayaligalu : ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ಕಾಮಿಡಿ ಧಾರಾವಾಹಿಗಳು ಪ್ರಸಾರವಾಗುತ್ತಿತ್ತು. ಆದರೆ ದಿನ ಕಳೆದಂತೆ ಹಾಸ್ಯ ಧಾರಾವಾಹಿಗಳಿಗೆ ಕಿರುತೆರೆಯಲ್ಲಿ ಜಾಗವಿಲ್ಲದಂತಾಗಿದೆ. ಹೀಗಾಗಿ ಕಿರುತೆರೆಯ ಹಾಸ್ಯ ಕಲಾವಿದರು, ಅವಕಾಶಕ್ಕಾಗಿ ಪರದಾಡುತ್ತಿದ್ದಾರೆ.
ಈ ನಡುವೆ ಉದಯ ಟಿವಿಯಲ್ಲಿ ಗವಿಪುರದ ಗಯ್ಯಾಳಿಗಳು ( Gauripurada Gayaligalu) ಅನ್ನುವ ಹಾಸ್ಯ ಧಾರಾವಾಹಿಯೊಂದು ಪ್ರಸಾರವಾಗುತ್ತಿದ್ದು, ರೇಟಿಂಗ್ ವಿಚಾರದಲ್ಲೂ ಸಾಕಷ್ಟು ಉತ್ತಮವಾಗಿದೆ. ಸಾಧು ಕೋಕಿಲಾ ನಿರ್ಮಾಣದ ಈ ಧಾರಾವಾಹಿಯನ್ನು ರವಿತೇಜ ನಿರ್ದೇಶಿಸುತ್ತಿದ್ದಾರೆ. ಇದು ಸಾಧು ಅವರ ಚೊಚ್ಚಲ ಧಾರಾವಾಹಿಯಾಗಿದ್ದು, ಟೈಟಲ್ ಸಾಂಗ್ ಸೇರಿದಂತೆ ಅನೇಕ ಕಡೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ : ಜಮೀರ್ ಗೆ ಸೆಡ್ಡು : ಈದ್ಗಾ ಮೈದಾನಕ್ಕಾಗಿ ಜುಲೈ 12ಕ್ಕೆ ಚಾಮರಾಜಪೇಟೆ ಬಂದ್
ನಾಲ್ಕು ಜನ ಗಯ್ಯಾಳಿಗಳು ಗವಿಪುರ ಅನ್ನುವ ಕಾಲನಿಯಲ್ಲಿ ವಾಸವಾಗಿರುತ್ತಾರೆ. ಈ ಗವಿಪುರದ ಸುತ್ತ ಕಥೆ ಸಾಗುವುದೇ ಈ ಧಾರಾವಾಹಿಯ ವಿಶೇಷವಾಗಿದ್ದು. ಗುಲಾಬಿ ಅನ್ನುವ ಪಾತ್ರ ತನ್ನ ತಂದೆಯ ಸಾವಿನ ಸಾಕ್ಷಿಗಾಗಿ ಗವಿಪುರಕ್ಕೆ ಎಂಟ್ರಿ ಕೊಡುತ್ತದೆ. ಹೀಗೆ ಸಾಗಿದ ಕಥೆ ಇದೀಗ 400 ಸಂಚಿಕೆಗೆ ಬಂದು ನಿಂತಿದೆ.
ಈಗಿನ ಪೈಪೋಟಿ ಕಾಲದಲ್ಲಿ 400 ಸಂಚಿಕೆ ಪೂರೈಸುವುದು ಅಂದ್ರೆ ದೊಡ್ಡ ಸಾಧನೆಯೇ ಸರಿ. ಹೀಗಾಗಿಯೇ ಈ ಧಾರಾವಾಹಿ ತಂಡಕ್ಕೊಂದು ಅಭಿನಂದನೆ ಹೇಳಲೇಬೇಕು.
ಅತ್ತೆಯಾಗಿ ಎಂಟ್ರಿ ಕೊಟ್ಟ ಸುಧಾರಾಣಿ : ಇದು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಕಥೆ
ಮನೋರಂಜನಾ ವಾಹಿನಿಗಳಲ್ಲಿ ಮತ್ತೊಂದು ಸುತ್ತಿನ ಧಾರಾವಾಹಿ ಸಮರ ಪ್ರಾರಂಭವಾಗಿದೆ. ರಿಯಾಲಿಟಿ ಶೋಗಳ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ವಾಹಿನಿಗಳು ಮತ್ತೆ ಧಾರಾವಾಹಿಯತ್ತ ಮುಖ ಮಾಡಿದೆ.
ಈ ಬಾರಿ ಝೀ ಕನ್ನಡ ಶ್ರೀರಸ್ತು ಶುಭಮಸ್ತು ಅನ್ನು ಧಾರಾವಾಹಿಯನ್ನು ಪರಿಚಯಿಸುತ್ತಿದ್ದು, ಕಥೆ, ಅದ್ದೂರಿ ನಿರ್ಮಾಣ ಮಾತ್ರ ಚೆನ್ನಾಗಿದ್ರೆ ಸಾಲದು ಎಂದು ಅರಿತಿರುವ ವಾಹಿನಿ ಸೆಲೆಬ್ರೆಟಿ ನಟರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಹೀಗಾಗಿಯೇ 90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಸುಧಾರಾಣಿ ಇದೀಗ ಶ್ರೀರಸ್ತು ಶುಭಮಸ್ತು ತಂಡ ಸೇರಿಕೊಂಡಿದ್ದಾರೆ.
ಹಾಗೇ ನೋಡಿದರೆ ಶ್ರೀರಸ್ತು ಶುಭಮಸ್ತು ಅನ್ನುವುದು ಜೀ ಕನ್ನಡದ ಹಳೆ ಟೈಟಲ್. ಆದರೆ ಈ ಬಾರಿ ಅದೇ ಟೈಟಲ್ ನೊಂದಿಗೆ ಹೊಸ ಕಥೆಯನ್ನು ಹೊತ್ತು ತರಲಾಗುತ್ತಿದೆ. ಈ ಬಾರಿಯ ಕಥೆ ಝೀ ಮರಾಠಿಯಲ್ಲಿ ಪ್ರಸಾರವಾದ ಅಗ್ಗಬಾಯ್ ಸಾಸುಬಾಯ್ ಅನ್ನುವ ಧಾರಾವಾಹಿಯದ್ದು. ಈ ಧಾರವಾಹಿಯ ರಿಮೇಕ್ ಶ್ರೀರಸ್ತು ಶುಭಮಸ್ತು
ಇದು ಅತ್ತೆ ಸೊಸೆ ನಡುವಿನ ಕಥೆಯಾಗಿತ್ತು. ಬದುಕಿನ ಮುಸ್ಸಂಜೆ ಪ್ರವೇಶಿಸಿರುವ ಅತ್ತೆ ಕುಟುಂಬದ ಸುಖಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಅತ್ತೆಯ ನೋವು ಅರಿತ ಸೊಸೆ ಅತ್ತೆಗೆ ಮರು ಮದುವೆ ಮಾಡಲು ಮುಂದಾಗುತ್ತಾಳೆ. ಅತ್ತೆಗೆ ಹೊಸ ಬದುಕು ಕಟ್ಟಿಕೊಡಲು ಸೊಸೆ ಹೋರಾಡುವುದೇ ಈ ಧಾರಾವಾಹಿಯ ಕಥಾ ಹಂದರ. ಅತ್ತೆಯಾಗಿ ಸುಧಾರಾಣಿ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಹಣ ಹಚ್ಚಿದ್ದಾರೆ.
ಅತ್ತೆ ಸೊಸೆ ಜಗಳ ನೋಡಿ ರೋಸಿ ಹೋದ ಪ್ರೇಕ್ಷಕರಿಗೆ ಅತ್ತೆ ಸೊಸೆ ನಡುವಿನ ಬಾಂಧವ್ಯ ಹೊಸ ಹುರುಪು ತಂದುಕೊಡಲಿದೆ. ಇನ್ನು ಸುಧಾರಾಣಿ ಧಾರಾವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದ ಮೇಲೆ ಕಿರುತೆರೆ ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
Discussion about this post