ರಾಜ್ಯದ ಮುಖ್ಯಮಂತ್ರಿಗಳ ಕುಟುಂಬದವರು ಕರಾವಳಿ ಜನತೆ ಮತ್ತು ವಿದ್ಯಾರ್ಥಿಗಳನ್ನು ಅವಮಾನಿಸಿದ ವಿಚಾರದಲ್ಲಿ ಮುಖ್ಯಮಂತ್ರಿಗಳ ಕುಟುಂಬ ಬೇಷರತ್ ಕ್ಷಮೆಯಾಚನೆ ಕೇಳಬೇಕು ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರ ಬಿಡುಗಡೆ ಮಾಡಿರುವ ಅವರು ಕರಾವಳಿ ಜಿಲ್ಲೆಯ ಜನತೆಯಿಂದ ತಿರಸ್ಕೃತರಾಗಿರುವ ಈ ಕುಟುಂಬದವರು ಕರಾವಳಿಗರ ಬಗ್ಗೆ ಕೀಳಾಗಿ ಮಾತನ್ನಾಡುತ್ತಿದ್ದಾರೆ. ಇವರ ವರ್ತನೆ ಅಸಹ್ಯಕರವಾಗಿದ್ದು, ಈ ರೀತಿಯ ಬೇಜವಾಬ್ದಾರಿ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

Discussion about this post