ಪುಟ್ಟ ಗೌರಿ ಮದುವೆಯ ಬಳಿಕ ಸದ್ದು ಮಾಡುತ್ತಿರುವ ಮಂಗಳ ಗೌರಿ ಮದುವೆ ಧಾರವಾಹಿ ಪ್ರೇಕ್ಷಕರಿಗೆ ಶಾಕಿಂಗ್ ನ್ಯೂಸ್ ಬಂದಿದೆ. ಟ್ರೋಲ್ ಪೇಜ್ ಗಳು ಈ ಧಾರವಾಹಿಯನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ರು ಆನೆ ನಡೆದದ್ದೇ ಹಾದಿ ಅನ್ನುವಂತೆ ಧಾರವಾಹಿಯನ್ನು ನಿರ್ದೇಶಕರು ಮುನ್ನಡೆಸುತ್ತಿದ್ದಾರೆ.
Altemate trp ಯೇ ಮುಖ್ಯವಾಗಿರುವುದರಿಂದ ಕಥೆ ಹಾಗೇ ಸಾಗಿದೆ. ಜನ ಇಷ್ಟ ಪಟ್ಟಿದ್ದಾರೆ ಅನ್ನುವುದಕ್ಕೆ ಬರುತ್ತಿರುವ ಟಿ ಆರ್ ಪಿಯೇ ಸಾಕ್ಷಿ. ಹೀಗಾಗಿಯೇ ಮಂಗಳ ಗೌರಿ ಮದುವೆ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದು ಜನರನ್ನು ರಂಜಿಸುತ್ತಿದೆ. ಹಲವಾರು ಟ್ವಿಸ್ಟ್ ಗಳನ್ನು ಹೊಂದಿರುವ ಧಾರವಾಹಿ ಗೃಹಿಣಿಯರ ಮನ ಗೆದ್ದಿದೆ.
ಈ ನಡುವೆ ಮಂಗಳ ಗೌರಿ ಮದುವೆ ಧಾರವಾಹಿಯಲ್ಲಿ ಇನ್ಸ್ ಪೆಕ್ಟರ್ ರಾಜೀವ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಗಗನ್ ಚಿನ್ನಪ್ಪ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಅನ್ನುವ ಸುದ್ದಿ ಬಂದಿದೆ. ಮಂಗಳ ಗೌರಿ ಪಯಣದ ನಡುವಿನಲ್ಲೇ ಇನ್ಸ್ ಪೆಕ್ಟರ್ ಪಾತ್ರದಿಂದ ಚಿನ್ನಪ್ಪ ನಿರ್ಗಮಿಸಿರುವುದು ಅಚ್ಚರಿ ತಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುದ್ದಿಗಳು ಓಡಾಡುತ್ತಿದ್ದು, ಧಾರವಾಹಿ ತಂಡವಾಗಲಿ, ವಾಹಿನಿಯಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.
ಗಗನ್ ಚಿನ್ನಪ್ಪ ಕೊಡಗಿನವರಾಗಿದ್ದು. ಅವರ ತಂದೆಗೆ ಪಿತ್ರಾರ್ಜಿತ ಆಸ್ತಿ ಕೂಡ ಇದೆ. ಅದನ್ನು ನೋಡಿಕೊಂಡು ಕೃಷಿ ಮಾಡಬೇಕು ಎಂಬುದು ಗಗನ್ ಆಸೆ. ಚಿಕ್ಕ ವಯಸ್ಸಿನಿಂದಲೂ ಕೃಷಿ ಮಾಡಬೇಕು ಎಂದು ಗಗನ್ ಆಸೆ ಇಟ್ಟುಕೊಂಡಿದ್ದಾರೆ. ಆ ಕುರಿತು ಅವರು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು ಕೂಡಾ. ಅಂದ ಹಾಗೇ ವಿದೇಶದಲ್ಲಿ 3 ವರ್ಷಗಳ ಕಾಲ ಐಟಿ ಉದ್ಯೋಗಿ ಕೆಲಸ ಮಾಡುತ್ತಿದ್ದ ಗಗನ್, ನಟನೆ ಸಲುವಾಗಿ ಉದ್ಯೋಗ ಬಿಟ್ಟು ಬಂದಿದ್ದರು.
ಗಗನ್ ಕುರಿತ ಮತ್ತಷ್ಟು ಇಟ್ರರೆಸ್ಟಿಂಗ್ ಸ್ಟೋರಿ ಮುಂದಿನ ಸಂಚಿಕೆಯಲ್ಲಿ. gan-chinappa-to-quit-mangala-gowri-maduve
Discussion about this post