ಗದಗ : ಕಳೆದ ಒಂದು ವಾರದಿಂದ ಗದಗ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗಿರಲಿಲ್ಲ. ಭಾನುವಾರ ಎಂಟನೇ ದಿನವೂ ಶೂನ್ಯ ಪ್ರಕರಣಗಳು ಪತ್ತೆಯಾಗುವ ಮೂಲಕ ಹೊಸ ಭರವಸೆಯೊಂದು ಜಿಲ್ಲೆಯಲ್ಲಿ ಗೋಚರಿಸಿದೆ. ಶೀಘ್ರದಲ್ಲೇ ಜಿಲ್ಲೆ ಕೊರೋನಾ ಮುಕ್ತವಾಗುತ್ತದೆ ಅನ್ನುವುದು ಜಿಲ್ಲೆಯ ಜನರ ನಿರೀಕ್ಷೆ.
ಹಾಗಂತ ಅದು ಸುಲಭವಿಲ್ಲ, ಅಕ್ಕ ಪಕ್ಕದ ಜಿಲ್ಲೆಗಳ ಕೊರೋನಾ ಸೋಂಕಿತರು ಜಿಲ್ಲೆ ಪ್ರವೇಶಿಸಿದರೆ ಎಲ್ಲಾ ನಿರೀಕ್ಷೆಗಳು ಮಣ್ಣು ಪಾಲಾಗುತ್ತದೆ. ಇನ್ನು ಗದಗ ಜಿಲ್ಲೆ ಸತತ ಎಂಟನೇ ದಿನ ಶೂನ್ಯ ಕೊರೋನಾ ದಾಖಲೆ ಬರೆದಿದ್ದು ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯೂ ಶೂನ್ಯಕ್ಕೆ ಇಳಿದಿದೆ.
ಇನ್ನು ಜಿಲ್ಲೆಯ ಪಾಸಿಟಿವಿಟಿ ದರ ಶೇ.0.06ಕ್ಕೆ ಇಳಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಇಳಿದಿದೆ. ಹಾಗಂತ ಅಧಿಕಾರಿಗಳ ಪ್ರಕಾರ ಈ ಖುಷಿಯ ಸುದ್ದಿ ತುಂಬಾ ದಿನ ಇರಲಾರದು, ಹಬ್ಬ ಹರಿ ದಿನ ಎಂದು ಜನ ಜಾಗೃತಿ ಮರೆತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಅಪಾಯ ಗ್ಯಾರಂಟಿ ಅಂದಿದ್ದಾರೆ.
Discussion about this post