ಮೈಸೂರು : ಕೊರೋನಾ ಆತಂಕದ ನಡುವೆಯೇ ಸರಳ ದಸರಾ ಆಚರಣೆಗೆ ಚಾಲನೆ ಸಿಕ್ಕಿದೆ. ಪ್ರತೀ ವರ್ಷ ರಾಜಕೀಯೇತರ ವ್ಯಕ್ತಿಗಳು ದಸರಾಗೆ ಚಾಲನೆ ನೀಡುತ್ತಿದ್ದರು. ಈ ಬಾರಿ ಈ ಸಂಪ್ರದಾಯ ಮುರಿದಿರುವ ರಾಜ್ಯ ಸರ್ಕಾರ ಎಸ್ ಎಂ ಕೃಷ್ಣ ಅವರಿಗೆ ಅವಕಾಶ ನೀಡಿದೆ. ಅದರಂತೆ ಚಾಮುಂಡೇಶ್ವರಿ ದೇವಿಗೆ ಎಸ್.ಎಂ.ಕೃಷ್ಣ ಬೆಳಿಗ್ಗೆ 8.25ಕ್ಕೆ ಪುಷ್ಪ ನಮನ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ಚಾಮುಂಡೇಶ್ವರಿಗೆ ಪತ್ನಿ ಸಮೇತ ಮಂಗಳಾರತಿ ಬೆಳಗಿದ ಎಸ್ ಎಂ ಕೃಷ್ಣ ನಂತರ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ, ಸಂಸದ ಪ್ರತಾಪಸಿಂಹ, ಸಚಿವರಾದ, ವಿ.ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ, ಆರ್.ಅಶೋಕ, ಶಿವರಾಮ ಹೆಬ್ಬಾರ್, ಬೈರತಿ ಬಸವರಾಜ, ಬಿ.ಸಿ.ಪಾಟೀಲ, ಡಾ.ಕೆ.ಸುಧಾಕರ, ಟಿ.ನಾರಾಯಣಗೌಡ, ಶಾಸಕರಾದ ಎಲ್.ನಾಗೇಂದ್ರ, ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಅಡಗೂರು ಎಚ್.ವಿಶ್ವನಾಥ್, ಕೆ.ಮಹದೇವು, ಬಿ.ಹರ್ಷವರ್ಧನ, ಕೆ.ಟಿ.ಶ್ರೀಕಂಠೇಗೌಡ, ಮುನಿರಾಜೇಗೌಡ, ಅರವಿಂದ ಬೆಲ್ಲದ, ಸಿ.ಎಸ್.ಮಂಜುನಾಥ್, ಮೇಯರ್ ಸುನಂದಾ ಫಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಉಪಸ್ಥಿತರಿದ್ದರು.
Discussion about this post