ಮಂಡ್ಯ : KRS ಸೋರುತ್ತಿದ್ರೆ ನೀರು ಸೋರದಂತೆ ಸುಮಲತಾ ಅವರನ್ನ KRS ಗೇಟುಗಳಿಗೆ ಮಲಗಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಂಡ್ಯಕ್ಕೆ ಇಂತಹ ಸಂಸದರು ಈ ಹಿಂದೆ ಬಂದಿಲ್ಲ, ಮುಂದೆ ಬರೋದು ಕೂಡಾ. ಕೆ.ಆರ್.ಎಸ್ ಅನ್ನು ಇವರೇ ರಕ್ಷಿಸುತ್ತಿದ್ದಾರೆ ಅನ್ನು ರೀತಿಯಲ್ಲಿ ಮಾತನಾಡುತ್ತಿದ್ದಾರೆ. KRS ಸೋರುತ್ತಿದ್ದರೆ ಕೆ.ಆರ್.ಎಸ್ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು ಅಂದಿದ್ದಾರೆ.
ಈ ಹಿಂದೆ ಕೆ.ಆರ್.ಎಸ್ ಡ್ಯಾಂ ಬಿರುಕುಬಿಟ್ಟಿದೆ ಎಂದು ಸುಮಲತಾ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಸುಮಲತಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕುಮಾರಸ್ವಾಮಿ ಇವತ್ತು ವಾಗ್ದಾಳಿ ನಡೆಸುವ ರೀತಿ ನೋಡಿದರೆ, ಮಂಡ್ಯದಲ್ಲಿ ನಿಖಿಲ್ ಸೋಲಿನ ನೋವು ಇನ್ನೂ ಕಾಡುವಂತಿದೆ. ಆ ನೋವಿನಿಂದ ಮಾಜಿ ಸಿಎಂ ಹೊರ ಬಂದಿಲ್ಲ ಅನ್ನುವುದು ಸ್ಪಷ್ಟ.
ಅಷ್ಟೇ ಅಲ್ಲ ಕುಮಾರಸ್ವಾಮಿ ಅದ್ಯಾಕೆ ಪದೇ ಪದೇ ಮಲಗುವ, ಮಲಗಿಸುವ ಬಗ್ಗೆ ಮಾತನಾಡುತ್ತರೋ ಗೊತ್ತಿಲ್ಲ.
ಅದು 2018, ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭ, ರೈತ ಮಹಿಳೆ ಜಯಶ್ರೀ ಗುರುನ್ನವರ್ ಅವರು ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವಿವಿಧ ಬೇಡಿಕೆ ಹಾಗೂ ದರ ನಿಗದಿ ಮಾಡುವಂತೆ ಸರ್ಕಾರದ ವಿರುದ್ಧ ಕಟುವಾಗಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ? ಈಗ ಮಾತನಾಡೋಕೆ ಬಂದಿದ್ದೀರಾ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವಾಗ ನನ್ನ ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದ್ದರು.
ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು.
Discussion about this post