ಆರೋಗ್ಯ ಇಲಾಖೆ ದಾಳಿ : ಭ್ರೂಣ ಹತ್ಯೆಕೋರರ ಬಂಧನ
ಮಂಡ್ಯ ಅಲೆಮನೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ದಂಧೆ ಬೆಳಕಿಗೆ ಬಂದ ವೇಳೆ ಇಡೀ ರಾಜ್ಯ ಬೆಚ್ಚಿ ಬಿದ್ದಿತ್ತು. ಇದಾದ ನಂತರವಾದರೂ ಭ್ರೂಣ ಹತ್ಯೆ ದಂಧೆಗೆ ಬ್ರೇಕ್ ಬೀಳಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ.
ಇದೀಗ ಮಂಡ್ಯ ಜಿಲ್ಲೆಯ ತೋಟದ ಮನೆಯೊಂದರಲ್ಲಿ ಅಲೆಮನೆ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ನಾಗಮಂಗಲ ತಾಲೂಕಿನ ದೇವರಮಾವಿನಕೆರೆಯ ತೋಟದ ಮನೆಯೊಂದರಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ದಂಧೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ ಜಿಲ್ಲಾ ಆರೋಗ್ಯಧಿಕಾರಿ ಡಾ.ಕೆ. ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದೆ.
ಬಂಧಿತರನ್ನು ತೋಟದ ಮನೆ ಮಾಲೀಕ ಧನಂಜಯ, ನರ್ಸ್ ನಾಗಮಣಿ,ಹಾಗೂ ಭ್ರೂಣಲಿಂಗಪತ್ತೆಗೆ ಬಂದಿದ್ದ ಗರ್ಭಿಣಿಯೊಬ್ಬರ ಗಂಡ ಮನೋಹರ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಸ್ಕ್ಯಾನಿಂಗ್ ಮಾಡುತ್ತಿದ್ದ ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ.
ಇನ್ನು ಈ ವೇಳೆ ಭ್ರೂಣ ಹತ್ಯೆಗಾಗಿ ಕರೆ ತಂದಿದ್ದ ಹಾಸನ ರಾಮನಾಥಪುರದ ಮಹಿಳೆಯನ್ನು ರಕ್ಷಿಸಲಾಗಿದ್ದು, ಆಭಾರ್ಷನ್ ಕಿಟ್, ಸ್ಕ್ಯಾನಿಂಗ್ ಯಂತ್ರವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಹಿನ್ನಲೆ
ಆರೋಪಿ ಧನಂಜಯ ಕೆಆರ್ ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶೀಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಹೆಣ್ಣು ಭ್ರೂಣಲಿಂಗ ಪತ್ತೆಗೆ ಬರುತ್ತಿದ್ದ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸಿ ಹಣ ಪಡೆದು ನಂತರ ತೋಟ ಮನೆಯಲ್ಲಿ ಭ್ರೂಣ ಹತ್ಯೆ ಮಾಡಿಸುತ್ತಿದ್ದ.
ಈ ವಿಷಯ ಆರೋಗ್ಯ ಇಲಾಖೆಯ ಕಿವಿಗೂ ಬಿದ್ದಿತ್ತು, ಆದರೆ ಸಾಕ್ಷಿಗಳು ಸಿಕ್ಕಿರಲಿಲ್ಲ. ಹೀಗಾಗಿ ಆರೋಗ್ಯ ಅಧಿಕಾರಿಗಳು ಧನಂಜಯನ ಚಲನವಲನ ಮೇಲೆ ಕಣ್ಣಿಟ್ಟಿದ್ದರು.
ಪ್ರತಿಯೊಂದು ಭ್ರೂಣ ಹತ್ಯೆಗೆ 15 ರಿಂದ 30 ಸಾವಿರ ರೂಪಾಯಿ ಹಣವನ್ನು ಆರೋಪಿಗಳು ಪಡೆಯುತ್ತಿದ್ದಾರೆ ಅನ್ನೋದು ಪ್ರಾಥಮಿಕ ಮಾಹಿತಿ, ತನಿಖೆಯ ನಂತರವಷ್ಟೇ ಸ್ಪಷ್ಟ ಮಾಹಿತಿ ಸಿಗಬೇಕಾಗಿದೆ. ಪ್ರಕರಣ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Nagamangala (Mandya dist): Female foeticide cases continue to haunt Mandya district and the Health department officials conducted a raid on a farmhouse and arrested three persons, allegedly involved in sex determination tests. They have been remanded judicial custody.
The officials conducted the raided on a farmhouse at Devara Mavinakere village, under Bindiganavile hobli, in Nagamangala taluk, on Thursday night