ಸಂಜೀವ ಮಠಂದೂರು ವಾಕಿಂಗ್ ಮಾಡೋ ಹೊತ್ತಿನಲ್ಲಿ ನಡೆದ ದುರ್ಘಟನೆ
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು Sanjeeva matandoor ಅವರು ವಿಷದ ಹಾವಿನ ಕಡಿತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವೆಂಬರ್ 16ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಂಜೀವ ಮಠಂದೂರು ಸಂಜೆ 5 ಗಂಟೆ ಸುಮಾರಿಗೆ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಮನೆಗೆ ತೆರಳಿದ್ದರು. ರಾತ್ರಿ 7 ಗಂಟೆ ಗೊತ್ತಿಗೆ ಹಿರೇಬಂಡಾಡಿ ಗ್ರಾಮ ಪಂಚಾಯ್ ಮಾಜಿ ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ ಜೊತೆ ಮನೆಯ ಅಂಗಳ ಸಮೀಪದಲ್ಲೇ ವಾಕಿಂಗ್ ಮಾಡುವಾಗ ಕಡಂಬಳ ಹಾವು ಕಚ್ಚಿದೆ.
ಇದನ್ನೂ ಓದಿ : Namma Metro ರೈಲಿನ ಸಿಸಿ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿದ್ರೆ ಏನಾಗುತ್ತದೆ
ಈ ವೇಳೆ ಕಚ್ಚಿದ್ದು ಹಾವೆಂದು ಗೊತ್ತಾದ ತಕ್ಷಣ ವೈದ್ಯರನ್ನು ಸಂಪರ್ಕಿಸಿದ್ದಾರೆ. ತುರ್ತಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಕಾರಣಕ್ಕಾಗಿ ವೈದ್ಯರು ಆಸ್ಪತ್ರೆಗೆ ಬರುವಂತೆ ಹೇಳಿದ್ರು. ಪುತ್ತೂರು ಮಹಾವೀರ ಆಸ್ಪತ್ರೆಗೆ ಬಂದ ಸಂಜೀವ ಮಥಂದೂರು ಅವರನ್ನು ಡಾ. ಸುರೇಶ್ ಪುತ್ತೂರಾಯ ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ.
ಇನ್ನು ಘಟನೆ ಕುರಿತಂತೆ ಮಾಜಿ ಶಾಸಕರ ಆತ್ಮೀಯರು ಪ್ರತಿಕ್ರಿಯಿಸಿದ್ದು, ಸಂಜೀವ ಮಠಂದೂರು ಅಪಾಯದಿಂದ ಪಾರಾಗಿದ್ದಾರೆ. ಹಾವು ಕಡಿದ ಸಂದರ್ಭದಲ್ಲಿ ತರುಚಿದ ಗಾಯಗಳಾಗಿವೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಶೀಘ್ರದಲ್ಲೇ ಅವರ ಆಸ್ಪತ್ರೆಯಿಂದ ಬಿಡುಗಡೆಯೂ ಆಗಲಿದ್ದಾರೆ ಅಂದಿದ್ದಾರೆ.
ಇದನ್ನೂ ಓದಿ :PDO ಶೃತಿ ಗೌಡ ಪ್ರಕರಣ : ಗುಂಡಿಕ್ಕಿ ಕೊಲೆಗೈದ ರಾಜೇಶ್ ಗೆ ಜೀವಾವಧಿ ಶಿಕ್ಷೆ
ಸಂಜೆ ಮನೆಯ ಹತ್ತಿರ ಇಂಟರ್ ಲಾಕ್ ಹಾಕಿದ್ದ ಅಂಗಳದಲ್ಲಿ ವಾಕಿಂಗ್ ಮಾಡುವಾಗ ವಿಷದ ಹಾವು ಬಲಕಾಲಿನ ಪಾಪಕ್ಕೆ ಕಚ್ಚಿದೆ. ಲೈಟ್ ಹಾಕಿ ನೋಡಿದಾಗ ಕಟ್ಟಮಲಕರಿ ಅಂತಾ ಗೊತ್ತಾಯ್ತು. ಕೂಡಲೇ ವೈದ್ಯರನ್ನು ಸಂಪರ್ಕಿಸಿದೆ. ಬಳಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ರಕ್ತ ಪರೀಕ್ಷೆಯಲ್ಲಿ ಯಾವುದೇ ವಿಷದ ಪ್ರಮಾಣ ಸಿಕ್ಕಿಲ್ಲ. ಇದೀಗ ಆರೋಗ್ಯವಾಗಿದ್ದು ಶೀಘ್ರದಲ್ಲೇ ಮನೆಗೆ ತೆರಳುತ್ತೇನೆ
Discussion about this post