ಇತ್ತೀಚೆಗೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಹೊಸದೊಂದು ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಅದುವೇ ಲಸಿಕಾಸ್ತ್ರ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮಕ್ಕಳಿಗೆ ಕೊಡಬೇಕಾದ ಲಸಿಕೆಯನ್ನು ಕಿತ್ತುಕೊಂಡು ವಿದೇಶಕ್ಕೆ ಕಳುಹಿಸಿದ್ರು. ದೇಶದ ಜನರಿಗೆ ಬೇಕಾದಷ್ಟು ಲಸಿಕೆ ಉತ್ಪಾದನೆಯಾಗುತ್ತಿಲ್ಲ. ಇದು ಮೋದಿ ವೈಫಲ್ಯಕ್ಕೆ ಸಾಕ್ಷಿ ಎಂದೆಲ್ಲಾ ಪ್ರಚಾರ ಮಾಡುತ್ತಿದ್ದಾರೆ.
ಈ ಅಪ್ರಪಚಾರದ ವಿರುದ್ಧ ದನಿ ಎತ್ತೇಕಾಗಿರುವ ಬಿಜೆಪಿ ನಾಯಕರು ಅದ್ಯಾಕೆ ಸೈಲೆಂಟ್ ಆಗಿದ್ದಾರೆ ಅನ್ನುವುದೇ ಗೊತ್ತಿಲ್ಲ. ಪ್ರತೀ ಬಾರಿಯೂ ಮೋದಿ ವಿರುದ್ಧ ಕಾಂಗ್ರೆಸ್ ಗುಡುಗಿದರೆ ಕೇವಲ ಕೆಲವೇ ಕೆಲವು ಮುಖಂಡರು ಅದಕ್ಕೆ ಪ್ರತೀ ಹೇಳಿಕೆ ನೀಡುತ್ತಾರೆ. ಹಾಗಂತ ಕಾಂಗ್ರೆಸ್ ಬಿತ್ತಿದ ಸಂಶಯಗಳನ್ನು ಜನರ ಮನಸ್ಸಿನಿಂದ ದೂರ ಮಾಡುವ ಕೆಲಸವನ್ನು ಅವರು ಮಾಡೋದೇ ಇಲ್ಲ.
ಇದೀಗ ದೇಶದಲ್ಲಿ ಲಸಿಕಾ ವಿತರಣೆ ವೈಫಲ್ಯ ಕಂಡಿದೆ ಅಂದ್ರೆ ಅದಕ್ಕೆ ಕಾಂಗ್ರೆಸ್ ನೇರ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ ಈ ಮೂಲಕ ಬಿಜೆಪಿ ನಾಯಕರು ಮಾಡಬೇಕಾದ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ.
Discussion about this post