ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಹೆಚ್ ಡಿ ಕುಮಾರಸ್ವಾಮಿಯವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ,
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಕುಮಾರಸ್ವಾಮಿ ಮಾತಿಗೆ ಇಲ್ಲಿ ಮನ್ನಣೆ ಅನ್ನುವ ಅರ್ಥದಲ್ಲಿ ಸಿಪಿ ಯೋಗೀಶ್ವರ್ ಮಾತನಾಡಿದ ಬೆನ್ನಲ್ಲೇ ಈ ಭೇಟಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನದ ಹೊತ್ತಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಎತ್ತಿದ ಕೈ ಹೊಂದಿರುವ ಕುಮಾರಸ್ವಾಮಿ ಬಿಎಸ್ವೈ ಬಳಿಗೆ ಹೋಗಿರುವುದ್ಯಾಕೆ ಅನ್ನುವುದೇ ಈಗಿರುವ ಪ್ರಶ್ನೆ.
ಮೂಲಗಳ ಪ್ರಕಾರ ಇದು ಅಭಿವೃದ್ಧಿ ಕುರಿತಂತೆ ಚರ್ಚೆಗಾಗಿ ನಡೆದ ಭೇಟಿಯೇ ಹೊರತು, ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎನ್ನಲಾಗಿದೆ.
ಪ್ರಮುಖವಾಗಿ ಮಂಡ್ಯ ಮೈಶುಗರ್ ಖಾಸಗೀಕರಣ, ಮನ್ಮುಲ್ ಅಕ್ರಮ ಪ್ರಕರಣ, ಜಿಲ್ಲಾ ಪಂಚಾಯಿತಿ ತಾ.ಪಂ ಮೀಸಲಾತಿ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆದಿದ್ದು, ಮೈಶುಗರ್ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಹಾಗೂ ಮನ್ಮುಲ್ ಹಗರಣವನ್ನ CBIಗೆ ವಹಿಸುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆದಿದ್ದು ಈ ಬಗ್ಗೆ ಮಾಜಿ ಸಿಎಂ ಹಾಲಿ ಸಿಎಂ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಭೇಟಿ ಸಂದರ್ಭದಲ್ಲಿ ಶಾಸಕರಾದ ಸಿ ಎಸ್ ಪುಟ್ಟರಾಜು, ಶ್ರೀನಿವಾಸ್ ಹಾಗೂ ಮಳವಳ್ಳಿ ಶಾಸಕ ಅನ್ನದಾನಿ ಉಪಸ್ಥಿತರಿದ್ದರು.
Discussion about this post