ನವದೆಹಲಿ : ಲಸಿಕೆ ಕಂಡು ಹಿಡಿದ ಬೆನ್ನಲ್ಲೇ ಕೊರೋನಾ ಅಬ್ಬರ ಕಡಿಮೆಯಾಯ್ತ ಅಂದುಕೊಂಡರೆ, ಲಸಿಕೆ ಹಾಕಿಸಿಕೊಳ್ಳದ ಕರ್ಮಕ್ಕೆ ಇದೀಗ ಯುರೋಪ್ ರಾಷ್ಚ್ರಗಳು ಕಂಗಲಾಗಿವೆ. ಒಂದು ವರ್ಷದ ಹಿಂದಿನ ಗಂಭೀರ ಪರಿಸ್ಥಿತಿ ಅಲ್ಲಿ ಮರುಕಳಿಸಿದ್ದು, ಬಿರುಗಾಳಿ ವೇಗದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದೆ.
ಈಗಾಗಲೇ ಯುರೋಪ್ ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ಹೊಸ ಅಲೆ ಗಂಭೀರ ಸ್ಥಿತಿ ತಲುಪಿದ್ದು ಪ್ರತಿ ವಾರ 18 ಲಕ್ಷ ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸೋಂಕಿನ ವೇಗ ಮತ್ತು ಸಾವಿನ ಸಂಖ್ಯೆ ಹೀಗೆ ಮುಂದುವರಿದರೆ ಫೆಬ್ರವರಿ ತಿಂಗಳಲ್ಲಿ 5 ಲಕ್ಷ ಜನ ಕೊರೋನಾ ಸೋಂಕಿಗೆ ಬಲಿಯಾಗಲಿದ್ದಾರೆ ಅಂದಿದೆ. ಇನ್ನು ಯುರೋಪ್ ನಲ್ಲಿ ಈವರೆಗೆ 6.5 ಕೋಟಿ ಜನರಿಗೆ ಸೋಂಕು ತಗುಲಿದ್ದು, 13.16 ಲಕ್ಷ ಜನ ಮೃತಪಟ್ಟಿದ್ದಾರೆ.
ಯುರೋಪ್ ನಲ್ಲಾಗುತ್ತಿರುವ ಬೆಳವಣಿಗೆ ಭಾರತೀಯರಿಗೂ ಎಚ್ಚರಿಗೆ ಗಂಟೆ. ಈಗಾಗಲೇ ಅನೇಕರು ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮತ್ತೆ ಕೆಲವರು ಲಸಿಕೆ ಬಗ್ಗೆ ಅಸಡ್ಡೆ ಹೊಂದಿದ್ದು ಲಸಿಕೆ ಹಾಕಿಸಿಕೊಂಡಿಲ್ಲ. ಒಂದು ವೇಳೆ ಹೊಸ ಅಲೆ ಭಾರತದಲ್ಲಿ ಸೃಷ್ಟಿಯಾಯ್ತು ಅಂದ್ರೆ ಲಸಿಕೆ ಹಾಕಿಸಿಕೊಳ್ಳದ ಮಂದಿಯೇ ವೈರಸ್ ಗೆ ಮೊದಲ ಟಾರ್ಗೇಟ್ ಆಗಲಿದ್ದಾರೆ.
The current pace of transmission across the 53 countries of the European Region is of grave concern,” WHO Europe director Hans Kluge told a press conference.
The rising number of cases of Covid-19 in Europe is of “grave concern” and the region could see another half a million deaths by early next year, the World Health Organization warned on Thursday.
Discussion about this post