ದೆಹಲಿಯಲ್ಲಿ ಪತ್ತೆಯಾದ ಹಣದ ಕುರಿತಂತೆ ವಿಚಾರಣೆ ಪ್ರಾರಂಭಿಸಿದ ಇಡಿ ಇದೀಗ ಕನಕಪುರದ ಬಂಡೆಯ ಸಾಮಾಜ್ಯಕ್ಕೆ ಲಗ್ಗೆ ಹಾಕಿದೆ.
ಇಡಿ ಹೀಗೆಲ್ಲಾ ತನಿಖೆಯನ್ನು ವಿಸ್ತರಿಸುವ ಹಾಗಿಲ್ಲ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸುತ್ತಿದ್ದರೆ, ಇಡಿ ಪರ ವಕೀಲರು ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ.
ಈ ನಡುವೆ ಅಚ್ಚರಿ ಅನ್ನುವಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಸಮನ್ಸ್ ಕೊಟ್ಟಿದ್ದು, ಸಪ್ಟೆಂಬರ್ 19 ರಂದು ವಿಚಾರಣೆಗೆ ಬನ್ನಿ ಅಂದಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ದೆಹಲಿ ಕಡೆ ಮುಖ ಮಾಡಿರುವ ಲಕ್ಷ್ಮಿ ಅಧಿಕಾರಿಗಳು ಕೇಳಬಹುದಾದ ಪ್ರಶ್ನೆಗಳಿಗೆ ಸಿದ್ದತೆ ಮಾಡಿಕೊಂಡಿದ್ದಾರೆ.
ಹಾಗಾದರೆ ಡಿಕೆಶಿ ಅಕ್ರಮ ವ್ಯವಹಾರ ಆರೋಪಕ್ಕೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ನಂಟೇನು ಅನ್ನುವುದು ಎಲ್ಲರ ಪ್ರಶ್ನೆ. ಇಡಿ ನೊಟೀಸ್ ಕೊಟ್ಟಿದೆ ಅಂದ ಮೇಲೆ ಡಿಕೆಶಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಹಣಕಾಸಿನ ವ್ಯವಹಾರ ನಡೆದಿರಬೇಕು. ಅದರೆ ಅದ್ಯಾವ ಕಾರಣಕ್ಕಾಗಿ ಇಡಿ ವಿಚಾರಣೆಗೆ ಬರುವಂತೆ ಹೇಳಿದೆ ಅನ್ನುವುದು ಇನ್ನೂ ಗೊತ್ತಾಗಿಲ್ಲ.
ಪಬ್ಲಿಕ್ ಟಿವಿ ವರದಿ ಪ್ರಕಾರ ಲಕ್ಷ್ಮಿಯವರ ಸಹೋದರ ಚನ್ನರಾಜು ಹೆಸರಿನಲ್ಲಿ ಡಿಕೆಶಿ ಬೇನಾಮಿಯಾಗಿ ಹೂಡಿಕೆ ಮಾಡಿದ್ದಾರಂತೆ. ಹೀಗಾಗಿ ಅವರನ್ನು ವಿಚಾರಣೆಗೆ ಕರೆಯಲಾಗಿದೆಯಂತೆ.
ಚನ್ನರಾಜು ಹೆಸರಿನಲ್ಲಿ ಹೂಡಿಕೆಯಾಗಿದೆ ಅಂದರೆ ಅವರನ್ನು ಇಡಿ ವಿಚಾರಣೆಗೆ ಕರೆಯಬೇಕಾಗಿತ್ತು. ಆದರೆ ಈ ವಿಚಾರದಲ್ಲಿ ಸೂಕ್ಷ್ಮವಾಗಿ ಯೋಚಿಸಿರುವ ಇಡಿ ಅಧಿಕಾರಿಗಳು, ಲಕ್ಷ್ಮಿ ಹೆಬ್ಬಾಳ್ಕರ್ ಮೂಲಕ ಡಿಕೆಶಿ ಈ ಹೂಡಿಕೆ ಮಾಡಿರುವುದನ್ನು ಪತ್ತೆ ಮಾಡಿದ್ದಾರಂತೆ. ಜೊತೆಗೆ ಹಲವು ಫೋನ್ ಕರೆಗಳನ್ನು ಪರಿಶೀಲಿಸಿದ ವೇಳೆ ಇದು ಪತ್ತೆಯಾಗಿದೆಯಂತೆ. ಹೀಗಾಗಿ ಡಿಕೆಶಿ ಪ್ರಕರಣದಲ್ಲಿ ಲಕ್ಷ್ಮಿಯವರನ್ನು ಇಡಿ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.
Discussion about this post