ಬೆಂಗಳೂರು : ಶಿವಮೊಗ್ಗದಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಸಿದ್ದು ಜನ ಬೆಚ್ಚಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಗುರುವಾರ ರಾತ್ರಿ 10.20ರ ಸುಮಾರಿಗೆ ಈ ನಿಗೂಢ ಸದ್ದು ಕೇಳಿ ಬಂದಿದ್ದು, ಸ್ಫೋಟದ ಸದ್ದು 20 ಕಿಮೀ ದೂರಕ್ಕೆ ಕೇಳಿಸಿದೆ.
ಕೇವಲ ಶಿವಮೊಗ್ಗ ಮಾತ್ರವಲ್ಲದೆ ಚಿಕ್ಕಮಗಳೂರಿನ ಅನೇಕ ಭಾಗಗಳಲ್ಲೂ ಈ ಸದ್ದು ಕೇಳಿಸಿದ್ದು ಜನ ಭಯ ಭೀತರಾಗಿದ್ದಾರೆ.
ಈ ನಡುವೆ ಚಿಕ್ಕಮಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ.
ಈ ನಿಗೂಢ ಸದ್ದಿನ ಕುರಿತಂತೆ ಮಾತನಾಡಿರುವ ಭೂಗರ್ಭ ಶಾಸ್ತ್ರಜ್ಞರು, ಇದು ಭೂಕಂಪವಲ್ಲ, ಗಾಳಿ ಒತ್ತಡದಿಂದ ಉಂಟಾಗಿರುವ ಸದ್ದು ಅಂದಿದ್ದಾರೆ.
ಕೊಪ್ಪ ತಾಲೂಕಿನ ದೊರೆಗಲ್ಲು ಗ್ರಾಮದಲ್ಲಿ ಮೊದಲು ಶಬ್ಧ ಕೇಳಿದ್ದು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲಾಡಳಿತ ಇದೀಗ ನಿಗೂಢ ಸದ್ದಿನ ಬೆನ್ನು ಹತ್ತಿದೆ.
Discussion about this post