Friday, March 5, 2021

ಶಿವಮೊಗ್ಗದಲ್ಲಿ ನಿಗೂಢ ಸ್ಫೋಟದ ಸದ್ದು – ಭೂಕಂಪದ ಭಯದಿಂದ ಮನೆಯಿಂದ ಹೊರ ಬಂದ ಜನ

Must read

- Advertisement -
- Advertisement -

ಬೆಂಗಳೂರು : ಶಿವಮೊಗ್ಗದಲ್ಲಿ  ಭೀಕರ ಸ್ಫೋಟದ ಸದ್ದು ಕೇಳಿಸಿದ್ದು ಜನ ಬೆಚ್ಚಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಗುರುವಾರ ರಾತ್ರಿ 10.20ರ ಸುಮಾರಿಗೆ ಈ ನಿಗೂಢ ಸದ್ದು ಕೇಳಿ ಬಂದಿದ್ದು, ಸ್ಫೋಟದ ಸದ್ದು 20 ಕಿಮೀ ದೂರಕ್ಕೆ ಕೇಳಿಸಿದೆ.

ಕೇವಲ ಶಿವಮೊಗ್ಗ ಮಾತ್ರವಲ್ಲದೆ ಚಿಕ್ಕಮಗಳೂರಿನ ಅನೇಕ ಭಾಗಗಳಲ್ಲೂ ಈ ಸದ್ದು ಕೇಳಿಸಿದ್ದು ಜನ ಭಯ ಭೀತರಾಗಿದ್ದಾರೆ.

ಈ ನಡುವೆ ಚಿಕ್ಕಮಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ.

ಈ ನಿಗೂಢ ಸದ್ದಿನ ಕುರಿತಂತೆ ಮಾತನಾಡಿರುವ ಭೂಗರ್ಭ ಶಾಸ್ತ್ರಜ್ಞರು, ಇದು ಭೂಕಂಪವಲ್ಲ, ಗಾಳಿ ಒತ್ತಡದಿಂದ ಉಂಟಾಗಿರುವ ಸದ್ದು ಅಂದಿದ್ದಾರೆ.

ಕೊಪ್ಪ ತಾಲೂಕಿನ ದೊರೆಗಲ್ಲು ಗ್ರಾಮದಲ್ಲಿ ಮೊದಲು ಶಬ್ಧ ಕೇಳಿದ್ದು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲಾಡಳಿತ ಇದೀಗ ನಿಗೂಢ ಸದ್ದಿನ ಬೆನ್ನು ಹತ್ತಿದೆ.

- Advertisement -
- Advertisement -
- Advertisement -

Latest article