ಈ ಹಿಂದೆ ಬಿಜೆಪಿಯೂ ಇದೇ ಕೆಲಸ ಮಾಡಿತ್ತು. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಮುಗಿ ಬೀಳಲು ಒಕ್ಕಲಿಗರ ನಾಯಕರನ್ನೇ ಬಳಸಿಕೊಂಡಿತ್ತು
ಬೆಂಗಳೂರು : ದಿನ ಬೆಳಗಾದ್ರೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಅನ್ನು ಟಾರ್ಗೆಟ್ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ಇನ್ನು ಮುಂದೆ ದಳಪತಿಗಳ ವಿರುದ್ಧ ಮಾತನಾಡೋದು ಅನುಮಾನ. ಈ ಬಗ್ಗೆ ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯ ಅವರಿಗೆ ಸೂಚನೆ ಕೊಟ್ಟಿದ್ದಾರೆ ಅನ್ನಲಾಗಿದ್ದು, ದೇವೇಗೌಡರು ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಮಾತನಾಡಿದ್ರೆ ಕಾಂಗ್ರೆಸ್ ಗೆ ನಷ್ಟವೇ ಹೊರತು ಲಾಭವಿಲ್ಲ ಅಂದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷ ನಡೆಸಿರುವ ಸಮೀಕ್ಷೆಯಲ್ಲಿ ಪಕ್ಷ ಸರಳ ಬಹುಮತ ಪಡೆಯುವ ಸೂಚನೆ ಸಿಕ್ಕಿದೆ. ಜೊತೆಗೆ ಇದೇ ಸಮೀಕ್ಷೆಯಲ್ಲಿ ರಾಜ್ಯ ಮುಖಂಡರ ತಪ್ಪುಗಳೇನು ಅನ್ನುವುದನ್ನು ವಿವರಿಸಲಾಗಿದೆ. ಈ ಸಮೀಕ್ಷೆಯ ವರದಿ ನೇರವಾಗಿ ರಾಹುಲ್ ಗಾಂಧಿ ಕೈ ಸೇರಿದ್ದು, ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಈ ಸೂಚನೆ ನೀಡಲಾಗಿದೆ. ದೇವೇಗೌಡರ ಕುಟುಂಬ ವಿರುದ್ಧ ಕಾಂಗ್ರೆಸ್ ನಾಯಕರು ಟೀಕೆ ಮಾಡಿದಷ್ಟು ಕಾಂಗ್ರೆಸ್ ಗೆ ನಷ್ಟ ಎಂದು ವರದಿಯಲ್ಲಿ ಹೇಳಲಾಗಿದೆಯಂತೆ.
ದಳಪತಿಗಳು ನಿಮ್ಮನ್ನು ಟಾರ್ಗೇಟ್ ಮಾಡಿದರೂ ನೀವು ಅದಕ್ಕೆ ಪ್ರತಿಕ್ರಿಯಿಸಬೇಡಿ, ಬದಲಾಗಿ ಒಕ್ಕಲಿಗ ನಾಯಕರಿಂದ ಅದಕ್ಕೆ ಉತ್ತರಿಸಿ, ಕಾಂಗ್ರೆಸ್ ನಲ್ಲಿರುವ ಒಕ್ಕಲಿಗ ನಾಯಕರು ದೇವೇಗೌಡರ ಕುಟುಂಬವನ್ನು ಎದುರಿಸಲಿ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರಂತೆ.
ಈ ಹಿಂದೆ ಬಿಜೆಪಿಯೂ ಇದೇ ಕೆಲಸ ಮಾಡಿತ್ತು. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಮುಗಿ ಬೀಳಲು ಒಕ್ಕಲಿಗರ ನಾಯಕರನ್ನೇ ಬಳಸಿಕೊಂಡಿತ್ತು.
Discussion about this post