ತಿಹಾರ್ ಜೈಲು ಮೊದಲ ಕರ್ನಾಟಕದ ಶಾಸಕ ಅನ್ನುವ ಹೆಸರನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ತನ್ನದಾಗಿಸಿಕೊಂಡಿದ್ದಾರೆ. ಅವರು ಕ್ಲೀನ್ ಹ್ಯಾಂಡ್ ಆಗಿ ಹೊರ ಬರುವ ತನಕ ಇದೊಂದು ಕಳಂಕ ಅವರಿಗೆ ಸದಾ ಅಂಟಿಕೊಂಡಿರುತ್ತದೆ.
ಹಾಗಂತ ತಿಹಾರ್ ಜೈಲು ಸೇರುತ್ತಿರುವ ಮೊದಲ ರಾಜಕಾರಣಿ ಇವರಲ್ಲ. ಹಲವು ವರ್ಷಗಳ ಹಿಂದೆ ಕನ್ನಡಿಗ ರಾಜಕಾರಣಿಯೊಬ್ಬರು ತಿಹಾರ್ ಜೈಲೂಟ ಸವಿದಿದ್ದರು.
ತಿಹಾರ್ ಜೈಲು ಸೇರಿದ ಮೊದಲ ಕನ್ನಡಿಗ ರಾಜಕಾರಣಿ ಎಂದರೆ ಅವರು ಜಾರ್ಜ್ ಫರ್ನಾಂಡೀಸ್. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬರೋಡಾ ಬಾಂಬ್ ಕೇಸ್ ಎಂದು ಪ್ರಸಿದ್ಧವಾದ ನಕಲಿ ಕೇಸ್ ಒಂದರಲ್ಲಿ ಫಿಟ್ ಮಾಡಿ ಜಾರ್ಜ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು.
ಮೂರು ವರ್ಷದಷ್ಟು ಕಾಲ ಜಾರ್ಜ್ ಫರ್ನಾಂಡೀಸ್ ತಿಹಾರ್ ಜೈಲಿನಲ್ಲಿದ್ದರು. ಮಾತ್ರವಲ್ಲದೆ ಜಾರ್ಜ್ ಫರ್ನಾಂಡೀಸ್ ಅವರೊಂದಿಗೆ ಸ್ನೇಹ ಇದೆ ಅನ್ನುವ ಕಾರಣಕ್ಕೆ ತೆಲುಗು ನಟಿ ಸ್ನೇಹಲತಾ ಮತ್ತು ಅವರ ಪತಿಯನ್ನು ಕೂಡ ಬೆಂಗಳೂರಿನಲ್ಲಿ ಬಂಧಿಸಿ ಜೈಲಿಗೆ ಹಾಕಲಾಗಿತ್ತು.
ಚಾರ್ಜ್ ಶೀಟ್ ನಲ್ಲಿ ಸ್ನೇಹಲತಾ ಅವರ ಹೆಸರು ಇಲ್ಲದೆ ಇದ್ದರೂ ಕೂಡ ಅವರನ್ನು ಆಕ್ರಮವಾಗಿ ಜೈಲಿನಲ್ಲಿ ಇರಿಸಿ ಚಿತ್ರ ಹಿಂಸೆ ಕೊಡಿಸಿತ್ತು ಆಗಿನ ಸರ್ಕಾರ. ಕೊನೆಗೆ ಜೈಲಿನಿಂದ ಬಿಡುಗಡೆಗೊಂಡ ವಾರದೊಳಗೆ ಅವರು ಮೃತಪಟ್ಟರು.
ಜಾರ್ಜ್ ಫರ್ನಾಂಡೀಸ್ ಅವರನ್ನು ಬಂಧಿಸಿದ ವೇಳೆ ಕೈಕೋಳ ಹಾಕಲಾಗಿತ್ತು. ಆ ವೇಳೆ ತೆಗೆದ ಚಿತ್ರ ಆಗ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿತ್ತು. ಮುಂದೆ ಅದೇ ಚಿತ್ರವನ್ನು ಮುಂದಿಟ್ಟುಕೊಂಡು ಜಾರ್ಜ್ ಜೈಲಿನಿಂದಲೇ ಚುನಾವಣೆಗೆ ನಿಂತು 3 ಲಕ್ಷಕ್ಕೂ ಅಧಿಕ ಮತವನ್ನು ಪಡೆದು ಗೆದ್ದಿದ್ದು ಇತಿಹಾಸ.
ಇದೀಗ ಅದೇ ತಿಹಾರ್ ಜೈಲಿಗೆ ಕರ್ನಾಟಕದ ಮತ್ತೊಬ್ಬ ರಾಜಕಾರಣಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ತಿಹಾರ್ ಜೈಲು ಪಾಲಾದ ಕರ್ನಾಟಕದ ಮೊದಲ ಮತ್ತು ಎರಡನೇ ಕನ್ನಡಿಗ ರಾಜಕಾರಣಿ ಎಂಬ ಕೀರ್ತಿಗೆ ಡಿಕೆಶಿ ಪಾತ್ರವಾಗಿದ್ದಾರೆ.
ಆದರೆ ಡಿಕೆಶಿ ತಿಹಾರ್ ಜೈಲು ಸೇರಿರುವುದು ಹವಾಲ ಪ್ರಕರಣ, ಅಕ್ರಮ ಹಣ ವರ್ಗಾವಣೆ ಮತ್ತು ಇತರೆ ಆರೋಪಗಳನ್ನು ಹೊತ್ತುಕೊಂಡು.
Discussion about this post