ಅಕ್ರಮ ಹಣಕಾಸು ವಹಿವಾಟು ಪ್ರಕರಣದಲ್ಲಿ ಇಡಿ ವಶದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಕೊಡಿಸಲು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಶತ ಪ್ರಯತ್ನ ನಡೆಸಿದರು.
Buy Touch Screen Laptops starting from $129
ಜಾಮೀನು ಸಿಗದಿದ್ದರೂ ಪರವಾಗಿಲ್ಲ, ಇಡಿ ಕಸ್ಟಡಿಯನ್ನಾದರೂ ತಪ್ಪಿಸಿಕೊಳ್ಳಬೇಕು ಅನ್ನುವುದು ಅವರ ಯೋಚನೆಯಾಗಿತ್ತು. ಆದರೆ ಇಡಿ ಪರ ವಕೀಲರ ಬಲವಾದ ವಾದ ಮಂಡನೆ ಸಿಂಘ್ವಿಯವರ ಪ್ರಯತ್ನಕ್ಕೆ ಹಿನ್ನಡೆ ಮಾಡಿತು.
ಶಿವಕುಮಾರ್ ಅವರನ್ನು ಈಗಾಗಲೇ 100 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಲಾಗಿದೆ. ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಹೈ ಬಿಪಿಯಿಂದ ಬಳಲಿದ್ದರು. ಶಿವಕುಮಾರ್ ಈಗಾಗಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇನ್ನು ವಿಚಾರಣೆಯ ಅಗತ್ಯವಿಲ್ಲ.
ಅನಾರೋಗ್ಯದಲ್ಲಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಬಾರದು. ಯಾರದ್ದೋ ಆಸ್ತಿ ವಿಚಾರಣೆಗಾಗಿ ಶಿವಕುಮಾರ್ ಅವರನ್ನು ಇಡಿ ಪ್ರಶ್ನೆ ಮಾಡುವುದು ಸರಿಯಲ್ಲ. ಬಿಪಿ ಎಂಬುದು ನಾಟಕ ಮಾಡುವ ವಿಷಯವಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿಲ್ಲ. ಒಬ್ಬ ವ್ಯಕ್ತಿ ಎಷ್ಟು ಒತ್ತಡಗಳನ್ನು ಸಹಿಸಿಕೊಳ್ಳಲು ಸಾಧ್ಯ. 13 ದಿನಗಳ ನಿರಂತರ ವಿಚಾರಣೆಯಿಂದ ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ. ಕಕ್ಷಿದಾರರ 22 ವರ್ಷದ ಪುತ್ರಿಯನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಶಿವಕುಮಾರ್ ಏನು ಮುಚ್ಚಿಡುವುದಿಲ್ಲ. ಎಲ್ಲಿಗೂ ಓಡಿ ಹೋಗುವುದಿಲ್ಲ. ವಿಚಾರಣೆಗೆ ಬೇಕೆಂದಾಗ ಹಾಜರಾಗುತ್ತಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಡಿಕೆಶಿಯವರ ಪ್ರಸ್ತುತ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದೆ.ಇದೇ ಪರಿಸ್ಥಿತಿ ಮುಂದುವರಿದೆರೆ ಅವರಿಗೆ ಪಾರ್ಶ್ವವಾಯು ಭಯವಿದೆ. ಇಡಿ ಅಧಿಕಾರಿಗಳು ಡಿಕೆಶಿ ತನಿಖೆಗೆ ಸಹಕರಿಸುತ್ತಿಲ್ಲ, ನಿದ್ದೆ ಮಾಡುತ್ತಿದ್ದಾರೆ ಅನ್ನುತ್ತಿದ್ದಾರೆ. ಆದರೆ ಒಬ್ಬ ವ್ಯಕ್ತಿ ಎಷ್ಟು ನಿದ್ದೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ನಾನು ಚಂದ್ರನನ್ನು ಕೇಳುತ್ತಿಲ್ಲ. ನನ್ನ
ಕಕ್ಷಿದಾರರನ್ನು ಇಡಿ ಕಸ್ಟಡಿಗೆ ಒಪ್ಪಿಸಬೇಡಿ ಎಂದು ಮನವಿ ಮಾಡುತ್ತಿದ್ದೇನೆ. ನಮ್ಮ ಕಕ್ಷಿದಾರರು ತೀವ್ರ ಅನಾರೋಗ್ಯಪೀಡಿತರಾಗಿದ್ದಾರೆ. ಅವರನ್ನು
ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಗಿದೆ. ಅವರು ಎಷ್ಟು
ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯ? ಆಸ್ತಿ ಮುಚ್ಚಿಟ್ಟಿದ್ದಾರೆ ಎಂದು
ತೀರ್ಮಾನಿಸುವವರು ಯಾರು ಎಂದು ಸಿಂಘ್ವಿ ಪ್ರಶ್ನಿಸಿದರು.
ಡಿಕೆಶಿಗೆ ಗುರುವಾರ
ರಾತ್ರಿ 200/140 ಬಿಪಿ ಇತ್ತು. ಅಧಿಕ ರಕ್ತದೊತ್ತಡ ಇದ್ದರೆ ಪಾರ್ಶ್ವವಾಯು
ಕೂಡ ಆಗುವ ಸಾಧ್ಯತೆ ಇದೆ. ಆದರೆ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಆರೋಗ್ಯದ ಸ್ಥಿತಿಯನ್ನು
ಮುಚ್ಚಿಟ್ಟಿದ್ದಾರೆ.
ಇಂಜೆಕ್ಷನ್ ಕೊಟ್ಟ ನಂತರವೂ ಬಿಜಿ 160/100 ಇತ್ತು ಎಂದು ಅಭಿಷೇಕ್ ಮನು
ಸಿಂಘ್ವಿ ವಾದಿಸಿದರು.
ಈ ವೇಳೆ ಡಿಕೆ ಶಿವಕುಮಾರ್ ಆರೋಗ್ಯ ಕುರಿತಂತೆ ಕಾಳಜಿ ವ್ಯಕ್ತಪಡಿಸಿದ ಕೋರ್ಟ್ ಉತ್ತಮ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆಯ ಭರವಸೆ ನೀಡಿ 4 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತು.
Discussion about this post