ಕೇಂದ್ರ ಬಿಜೆಪಿ ನಾಯಕರು ಅಳೆದು ತೂಗಿ ಮಾಡಿದ ರಾಜ್ಯಸಭೆಯ ನಾಮ ನಿರ್ದೇಶನ ಹಲವರಿಗೆ ಬಿಸಿ ತುಪ್ಪವಾಗಿದೆ ಅನ್ನುವುದು ಸತ್ಯ. dk shivakumar meet veerendra heggade
ಬೆಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಪ್ರಸ್ತುತ ಬೆಂಗಳೂರಿನಲ್ಲಿರುವ ವೀರೇಂದ್ರ ಹೆಗ್ಗಡೆಯವರನ್ನು ಅನೇಕ ಗಣ್ಯರು ಭೇಟಿ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. dk shivakumar meet veerendra heggade. ಶುಕ್ರವಾರ ಹೆಗ್ಗಡೆಯವರನ್ನು ಭೇಟಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯಸಭೆಗೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : Dharmasthala veerendra hegde : ಧರ್ಮಸ್ಥಳಕ್ಕೆ ಶಾಸನ ಸಭೆ ಹೊಸದಲ್ಲ : ವೀರೇಂದ್ರ ಹೆಗ್ಗಡೆ ತಂದೆ ತಾತ ಕೂಡಾ ಶಾಸಕರಾಗಿದ್ದರು
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಈ ಆಯ್ಕೆ ನನಗೆ ಖುಷಿ ತಂದಿದೆ. ನನ್ನ ಹೃದಯ ತುಂಬಿ ಬಂದಿದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ಹೆಜ್ಜೆಯನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ ತಮ್ಮ ಹಾಗೂ ಹೆಗ್ಗಡೆಯವರ ಸಂಬಂಧವನ್ನು ನೆನಪಿಸಿಕೊಂಡ ಡಿಕೆ ಶಿವಕುಮಾರ್, ನನಗೂ ವೀರೇಂದ್ರ ಹೆಗ್ಗಡೆಯವರಿಗೂ ಇರುವ ಸಂಬಂಧ, ಮಂಜುನಾಥನಿಗೂ ಭಕ್ತರಿಗೂ ಇರುವ ಸಂಬಂಧ. ಭಕ್ತನಿಗೆ ಭಗವಂತನ ಮೇಲೆ ಇರುವ ಪ್ರೀತಿ ವಿಶ್ವಾಸ ಗೌರವ ಅವರ ಮೇಲಿದೆ ಅಂದರು.
ಇದೇ ವೇಳೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಮ್ಮನನ್ನು ರಾಜಕೀಯ ಸೆಳೆಯಲು ನಾನು ಹಲವು ವರ್ಷಗಳ ಹಿಂದೆ ಯತ್ನಿಸಿದ್ದೆ. ವಿಧಾನಸಭಾ ಕ್ಷೇತ್ರವೋ, ಲೋಕಸಭಾ ಕ್ಷೇತ್ರವೋ ಬೇಕಿದ್ದನ್ನು ಆಯ್ಕೆ ಮಾಡಿ ಅಂದಿದೆ. ಆದರೆ ಕ್ಷೇತ್ರದ ಗಾಂಭಿರ್ಯತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಆಫರ್ ಒಪ್ಪಿರಲಿಲ್ಲ.
ಇದನ್ನೂ ಓದಿ : PSI Anita Lakshmi : ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ : ಅನಾರೋಗ್ಯ ಪೀಡಿತನೊಬ್ಬನಿಗೆ ಸಹಾಯ ಹಸ್ತ ಚಾಚಿದ ಅನಿತಾ ಲಕ್ಷ್ಮಿ
25 ವರ್ಷಗಳ ಹಿಂದೆಯೇ ಬೇರೆ ಬೇರೆ ಪ್ರಯತ್ನಗಳು ನಡೆದು ಹೋಗಿದೆ. ಇವತ್ತು ನಾನು ರಾಜಕೀಯವನ್ನು ಬದಿಗಿಟ್ಟುಅವರನ್ನು ಅಭಿನಂದಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ ಕೊಟ್ಟ ನಟಿಗೆ ಸಂಕಷ್ಟ : ಸಾಯಿ ಪಲ್ಲವಿ ಮನವಿ ತಿರಸ್ಕರಿಸಿದ ನ್ಯಾಯಾಲಯ
ಸಾಯಿ ಪಲ್ಲವಿ ಕೊಟ್ಟ ಹೇಳಿಕೆ ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಸಾಗಾಣಿಕೆ ಮಾಡುವವರ ಹತ್ಯೆ ಒಂದೇ ಎಂದು ಹೇಳಿರುವುದೇ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ.
ಕೆಲ ವಾರಗಳ ಹಿಂದೆ ಸಂದರ್ಶನವೊಂದರಲ್ಲಿ ಕಾಶ್ಮೀರ ಪಂಡಿತರ ಮತ್ತು ಗೋ ಸಾಗಾಣಿಕೆದಾರರ ಹತ್ಯೆಯನ್ನು ಹೋಲಿಸಿ sai pallavi ಮಾತನಾಡಿದ್ದರು. ಅವರು ಕೊಟ್ಟ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧ ಅಭಿಪ್ರಾಯಗಳು ಕೂಡಾ ವ್ಯಕ್ತವಾಗಿತ್ತು.
ವಿರಾಟ ಪರ್ವಂ ಸಿನಿಮಾ ಪ್ರಚಾರದ ವೇಳೆ ಸಾಯಿ ಪಲ್ಲವಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ತಪ್ಪು. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ ಎರಡೂ ಕೂಡಾ ಒಂದೇ ಅಂದಿದ್ದರು. ಇದಾದ ಬಳಿಕ ಸ್ಪಷ್ಟನೆ ಕೊಟ್ಟಿದ್ದ ಅವರು ಪ್ರತೀ ಜನ ಮುಖ್ಯ ಅಂದಿದ್ದರು. ಈ ವಿವಾದದಿಂದಲೇ ವಿರಾಟ ಪರ್ವಂ ಸಿನಿಮಾ ಸೋತಿತು ಅನ್ನುವ ಮಾತುಗಳು ಕೇಳಿ ಬಂತು.
ಈ ನಡುವೆ ಸಾಯಿ ಪಲ್ಲವಿ ವಿರುದ್ಧ ಹಲವು ಕಡೆಗಳಲ್ಲಿ ದೂರು ಕೂಡಾ ದಾಖಲಾಗಿದೆ. ಈ ನಡುವೆ ಹೈದರಬಾದ್ ಸುತಲ್ತಾನ್ ಬಝಾರ್ ಇನ್ಸ್ ಪೆಕ್ಟರ್ ಕೊಟ್ಟ ನೋಟಿಸ್ ರದ್ದುಗೊಳಿಸುವಂತೆ ಸಾಯಿ ಪಲ್ಲವಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನೋಟಿಸ್ ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದೆ.
ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ನ್ಯಾಯಾಧೀಶರು, ಸತ್ಯಾಸತ್ಯತೆ ಅರಿಯುವ ನಿಟ್ಟಿನಲ್ಲಿ ಸಾಯಿ ಪಲ್ಲವಿ ಪೊಲೀಸ್ ವಿಚಾರಣೆ ಎದುರಿಸಬೇಕು ಅಂದಿದೆ.
ಹೈದರಬಾದ್ ಭಜರಂಗದಳದ ಸದಸ್ಯ ಅಖಿಲ್ ಅನ್ನುವವರು ಕೊಟ್ಟ ದೂರಿನ ಹಿನ್ನಲೆಯಲ್ಲಿ ಸುಲ್ತಾನ್ ಬಝಾರ್ ಇನ್ಸ್ ಪೆಕ್ಟರ್ ನೋಟಿಸ್ ಜಾರಿ ಮಾಡಿದ್ದರು.
Discussion about this post